ಪಾಕ್ ಪರ ಘೋಷಣೆ ಕೂಗೋದು ದೇಶಭಕ್ತಿನಾ..? ಇವೆಲ್ಲಾ ತುಕಡೆ ಗ್ಯಾಂಗ್ ಗಳು ಮಾಡುವ ಕೆಲಸ- ಸಚಿವ ಸಿ.ಟಿ ರವಿ ಕಿಡಿ ಚಿಕ್ಕಮಗಳೂರು,ಫೆ,23,2020(..): ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರವಾಸೋಧ್ಯಮ ಸಚಿವ ಸಿ.ಟಿ ರವಿ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸಿ.ಟಿ ರವಿ, ದೇಶದ್ರೋಹಿಗಳಿಗೆ ಕ್ಷಮೆ ಇರಬಾರದು, ಅವರ ಪರ ಯಾರೂ ವಾದ ಮಾಡಬಾರದು. ಪಾಕಿಸ್ತಾನ ಪರ ಘೋಷಣೆ ಕೂಗೋದು ದೇಶಭಕ್ತಿನಾ..? ಫ್ರೀಕಾಶ್ಮೀರ್ ಎಂದು ಕೂಗೋದು ದೇಶಭಕ್ತಿನಾ..? ಇವೆಲ್ಲಾ ತುಕಡೆ ಗ್ಯಾಂಗ್ ಗಳು ಮಾಡುವ ಕೆಲಸ ಎಂದು ವಾಗ್ದಾಳಿ ನಡೆಸಿದರು. ತುಕಡೆ ಗ್ಯಾಂಗ್ ಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮುಜುಗರವನ್ನುಂಟು ಮಾಡಲು ಯತ್ನಿಸುತ್ತಿದ್ದಾರೆ. ಪಾಕಿಗಳನ್ನ ಖುಷಿಪಡಿಸುವ ಕೆಲಸ ಮಾಡುವವರಿಗೆ ನಮ್ಮ ದೇಶದಲ್ಲಿ ಏಕೆ ಅನ್ನ ಹಾಕಬೇಕು..? ಇಂತಹ ದೇಶದ್ರೋಹಿಗಳಿಗೆ ಕ್ಷಮೆ ನೀಡಬಾರದು ಎಂದು ತಿಳಿಸಿದರು. : - - – - – -