ಭಾರತದ ವಾಯುಪಡೆಯ ಯುದ್ದ ವಿಮಾನ ಪತನ. ರಾಜಸ್ಥಾನ,ಮಾರ್ಚ್,12,2024(..):ಭಾರತೀಯ ವಾಯುಪಡೆಗೆ(ಐಎಎಫ್) ಸೇರಿದ ಯುದ್ದ ವಿಮಾನ ಪತನವಾಗಿದೆ. ರಾಜಸ್ಥಾನದ ಜೈಸಲ್ಮೇರ್‌ ನಲ್ಲಿ ಐಎಎಫ್ ಗೆ ಸೇರಿದ ತೇಜಸ್ ವಿಮಾನವೊಂದು ಪತನವಾಗಿದೆ. ತರಬೇತಿ ಕಾರ್ಯಚರಣೆಯ ವೇಳೆಯೇ ಅಪಘಾತಕ್ಕೆ ಒಳಗಾದ ತೇಜಸ್, ನೆಲಕ್ಕೆ ಅಪ್ಪಳಿಸಿದ್ದು, ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಪೈಲೆಟ್ ಅಪಾಯದಿಂದ ಪಾರಾಗಿದ್ದಾರೆ. 23 ವರ್ಷಗಳಲ್ಲಿ ತೇಜಸ್ ಅಪಘಾತಕ್ಕೆ ಈಡಾಗಿದ್ದು ಇದೇ ಮೊದಲಬಾರಿಗೆ ಎನ್ನಲಾಗಿದೆ. : - - - .