ದೇಶದ್ರೋಹಿಗಳಿಗೆ ಉಗ್ರಶಿಕ್ಷೆಯಾಗಲಿ: ರಾಷ್ಟ್ರ ಪ್ರೇಮದ ವಿಚಾರದಲ್ಲಿ ರಾಜಿಯಾಗಬೇಡಿ- ಸಂಸದೆ ಶೋಭಾ ಕರಂದ್ಲಾಜೆ…. ಉಡುಪಿ,ಫೆ,21,2020(..): ನಿನ್ನೆ ಫ್ರೀಡಂ ಪಾರ್ಕ್ ಬಳಿ ಅಮೂಲ್ಯ ಇಂದು ಟೌನ್ ಹಾಲ್ ಬಳಿ ಆರ್ದಾ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ದೇಶದ್ರೋಹಿಗಳಿಗೆ ಉಗ್ರಶಿಕ್ಷೆಯಾಗಲಿ ಎಂದು ಸಂಸದೆ ಶೋಭ ಕರಂದ್ಲಾಜೆ ಒತ್ತಾಯಿಸಿದ್ದಾರೆ. ಉಡುಪಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಇಂದು ಘೋಷಣೆ ಕೂಗಿದ ಹುಡುಗಿ ಯಾರು, ಅವಳ ಹಿನ್ನಲೆ ಏನು ಎಂಬುದು ತನಿಖೆ ಆಗಬೇಕು. ಅಮೂಲ್ಯ ತಂದೆ ಬಗ್ಗೆ ಕಾರ್ಯಕ್ರಮ ಆಯೋಜಕರ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು. ಹಾಗೆಯೇ ಆಕೆಯ ಪರವಾಗಿ ಯಾವುದೇ ವಕೀಲರು ಕೇಸು ನಡೆಸಬಾರದು, ರಾಷ್ಟ್ರ ಪ್ರೇಮದ ವಿಚಾರದಲ್ಲಿ ರಾಜಿ ಆಗಬೇಡಿ ಎಂದು ಮನವಿ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ, ದೇಶ ದ್ರೋಹಿಗಳ ಜಾಲ ನಿರ್ಮಾಣವಾಗಿದೆ. ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಪ್ರಚಾರಕ್ಕಾಗಿ ಹೇಳಿಕೆ ಕೊಡುತ್ತಿದ್ದಾರೆ. ಇಂತಹ ದೇಶದ್ರೋಹಿಗಳಿಗೆ ಉಗ್ರ ಶಿಕ್ಷೆ ಆಗಬೇಕು, ಕಾನೂನಿನಲ್ಲಿ ಬದಲಾವಣೆ ಆಗಬೇಕೆಂದರು. : -- –- -