ಟೌನ್ ಹಾಲ್ ನಲ್ಲಿ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ ಕೂಗಿದ್ದು ಅರುದ್ರಾ.. ಬೆಂಗಳೂರು,ಫೆ,21,2020(..): ನಿನ್ನೆ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ವಿರುದ್ದ ಪ್ರತಿಭಟನೆ ವೇಳೆಯೇ ಮತ್ತೆ ಪಾಕ್ ಪರ ಘೋಷಣೆ ಕೂಗಲಾಗಿದೆ. ಹೀಗೆ ಘೋಷಣೆ ಕೂಗಿರುವುದು ಮಲ್ಲೇಶ್ವರಂ ನಿವಾಸಿ ಅರುದ್ರಾ ಎಂಬ ಯುವತಿ ಎಂದು ಗುರುತು ಪತ್ತೆಯಾಗಿದೆ. ನಿನ್ನೆ ಫ್ರೀಡಂಪಾರ್ಕ್ ನಲ್ಲಿ ಸಿಎಎ ವಿರುದ್ದ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ವಿರುದ್ದ ಇಂದು ಬೆಂಗಳೂರಿನ ಟೌನ್ ಹಾಲ್ ಬಳಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು ಈ ವೇಳೆ ಅರುದ್ರಾ ಪಾಕ್ ಪರ ಘೋಷಣೆ ಕೂಗಿದ್ದಾಳೆ. ಅರುದ್ರಾ ಮಲ್ಲೇಶ್ವರಂ ನಿವಾಸಿಯಾಗಿದ್ದು, ಅಲ್ಲಿನ ಕಾಲೇಜೊಂದರಲ್ಲಿ ಇಂಜನಿಯರಿಂಗ್ ವ್ಯಾಸಂಗ ಮಾಡಿದ್ದಾಳೆ. ಆಕೆ ವ್ಯಾಸಂಗ ಬಳಿಕ ಗ್ರಾಫಿಕ್ ಡಿಜೈನರ್ ಆಗಿದ್ದಳು ಎನ್ನಲಾಗಿದೆ. ಬಂಧಿತ ಯುವತಿ ಅರುದ್ರಾಳನ್ನ ಎಸ್‌ಜೆ ಪಾರ್ಕ್ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. : - -- – - -