ಬೆಂಗಳೂರಿನಲ್ಲಿ ಮತ್ತೆ ಪಾಕ್ ಪರ ಘೋಷಣೆ: ಯುವತಿ ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ… ಬೆಂಗಳೂರು,ಫೆ,21,2020(….): ನಿನ್ನೆ ಫ್ರೀಡಂಪಾರ್ಕ್ ಬಳಿ ಸಿಎಎ ವಿರುದ್ದ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ ಕೂಗಿ ಅಮೂಲ್ಯ ಈಗಾಗಲೇ ನ್ಯಾಯಾಂಗ್ ಬಂಧನದಲ್ಲಿದ್ದು ಈ ಬೆನ್ನಲ್ಲೆ ಇದೀಗ ಮತ್ತೆ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ. ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ವಿರುದ್ದ ಟೌನ್ ಹಾಲ್ ನಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಯುವತಿಯೊಬ್ಬಳು ಕಾಶ್ಮೀರ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದಾಳೆ. ಭಿತ್ತಿಪತ್ರ ಹಿಡಿದು ಘೋಷಣೆ ಕೂಗಿದ್ದು ಯುವತಿಯನ್ನ ಎಸ್ ಜೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಕ್ ಪರ ಘೋಷಣೆ ಕೂಗಿದ ಯುವತಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಎಸ್ ಜೆ ಪೊಲೀಸ್ ಠಾಣೆಗೆ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂಮೇಂದು ಮುಖರ್ಜಿ ಭೇಟಿ ನೀಡಿದ್ದಾರೆ. : -- - – - - – .