ಬಿಜೆಪಿ ಸರ್ಕಾರ ಅಪರೇಷನ್ ಕಮಲ ಮೂಲಕ ಹುಟ್ಟಿದ ಅನೈತಿಕ ಕೂಸು- ವಿಧಾನಸಭೆಯಲ್ಲಿ ಸಿದ್ಧರಾಮಯ್ಯ ವಾಗ್ದಾಳಿ… ಬೆಂಗಳೂರು,ಫೆ,20,2020(..): ಬಿಜೆಪಿ ಸರ್ಕಾರ ಅಪರೇಷನ್ ಕಮಲ ಮೂಲಕ ಹುಟ್ಟಿದ ಅನೈತಿಕ ಕೂಸು. ಬಿಜೆಪಿ ಸರ್ಕಾರ ಅನೈತಿಕವಾಗಿ ಬಂದಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದರು. ವಿಧಾನಸಭೆಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಬಿಎಸ್ ಯಡಿಯೂರಪ್ಪ ಜನಾದೇಶದಿಂದ ಅಧಿಕಾರಕ್ಕೆ ಬಂದಿಲ್ಲ. ಚುನಾವಣೆ ನಡೆದಾಗ ಯಾವುದೇ ಪಕ್ಷಕ್ಕೆ ಬಹುಮತ ಬಂದಿಲ್ಲ. ಈ ಸರ್ಕಾರ ಕಾಂಗ್ರೆಸ್,ಜೆಡಿಎಸ್ 17 ಶಾಸಕರನ್ನು ಆಪರೇಷನ್ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. 17 ಮಂದಿ ರಾಜೀನಾಮೆ ಕೊಟ್ಟಿದ್ದರಿಂದ ಬಿಎಸ್ ವೈ ಸಿಎಂ ಆಗಿದ್ದಾರೆ. ಬಿಜೆಪಿ ಮಂತ್ರಿಗಳು ಜನಾಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದೇವೆ ಅಂತಾರೆ. ನೀವು ಅಪರೇಷನ್ ಕಮಲದಿಂದ ಅಧಿಕಾರಕ್ಕೆ ಬಂದಿದ್ದೇವೆ ಎನ್ನಬೇಕು ಎಂದು ಲೇವಡಿ ಮಾಡಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಕುರಿತು ಮಾತನಾಡಿದ ಸಿದ್ಧರಾಮಯ್ಯ, ಒಂದು ದಿನದಲ್ಲೇ ರಾಜ್ಯಪಾಲರ ಭಾಷಣದ ಚರ್ಚೆ ಮುಗಿಸೋಕೆ ಆಗಲ್ಲ. ಅದಕ್ಕೆ ಉತ್ತರ ಪಡೆದುಕೊಳ್ಳೋಕೆ ಸಾಧ್ಯವಿಲ್ಲ. ಇದು ಸದಸ್ಯರ ಹಕ್ಕು ಮೊಟಕು ಮಾಡಿದಂತೆ. ರಾಜ್ಯಪಾಲರ ಭಾಷಣದ ಚರ್ಚೆಗೆ ಕನಿಷ್ಟ 10 ದಿನ ನಿಗದಿ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ನುಡಿದರು. : – – - -