ಆಡಳಿತ ಪಕ್ಷದ ಕಾರ್ಯ ವೈಖರಿ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಶಾಸಕ ಅಸಮಾಧಾನ… ಬೆಂಗಳೂರು,ಫೆ,20,2020(..): ನೆರೆ ಪರಿಹಾರ ವಿಚಾರ ಕುರಿತು ಆಡಳಿತ ಪಕ್ಷದ ವಿರುದ್ದವೇ ಬಿಜೆಪಿ ಶಾಸಕ ಆನಂದ್ ಮಾಮನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ಕಲಾಪದಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಮಾತನಾಡತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಆನಂದ್ ಮಾಮಿ, ನೆರೆ ಹಾವಳಿಗೆ ತುತ್ತಾಗಿರುವ ನೆರೆ ಸಂತ್ರಸ್ಥರಿಗಿನ್ನೂ ನೆರವು ಸಿಕ್ಕಿಲ್ಲ. ಮೊದಲ ಬಾರಿ ಪ್ರವಾಹ ಬಂದ ವೇಳೆ ಆಗಿದ್ದ ನಷ್ಟಕ್ಕೆ ಪರಿಹಾರ ಸಿಕ್ಕಿದೆ. ಆದರೆ 2ನೇ ಬಾರಿಗೆ ನೆರೆ ಬಂದ ವೇಳೆ ಆಗಿದ್ದ ನಷ್ಟಕ್ಕೆ ಪರಿಹಾರ ಸಿಕ್ಕಿಲ್ಲ ಎಂದು ಆಡಳಿತ ಪಕ್ಷದ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಆನಂದ್ ಮಾಮನಿ ಹೇಳಿಕೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಸೇರಿ ಹಲವರು ಸಹಮತ ವ್ಯಕ್ತಪಡಿಸಿದರು. : - –- -