ಪಾರ್ಕ್ ಮಾಡಿದ್ದ ಮಿನಿ ಬಸ್ ಮತ್ತು ಟಾಟಾ ಸುಮೋ ವಾಹನಕ್ಕೆ ದುಷ್ಕರ್ಮಿಗಳಿಂದ ಬೆಂಕಿ… ಮೈಸೂರು,ಫೆ,19,2020(..): ವ್ಯಕ್ತಿಯೋರ್ವರು ಪಾರ್ಕ್ ಮಾಡಿದ್ದ ಮಿನಿ ಬಸ್ ಮತ್ತು ಟಾಟಾ ಸುಮೋ ವಾಹನಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ನಾಚನಹಳ್ಳಿಯಲ್ಲಿ ಈ ಘಟನೆ‌ ನಡೆದಿದೆ. ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಅನ್ವರ್ ಎಂಬುವರ ಮಿನಿ ಬಸ್ ಮತ್ತು ಟಾಟಾ ಸುಮೋಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯಿಂದಾಗಿ ಮಿನಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದ್ದು ಟಾಟಾ ಸುಮೋ ಮುಂದಿನ ಭಾಗ ಹಾನಿಯಾಗಿದೆ. ಪಕ್ಕದಲ್ಲಿದ್ದ ಇನ್ನೊಂದು ಮಿನಿ ಬಸ್ ಗೂ ಕೂಡಾ ಬೆಂಕಿ ತಗುಲಿದ್ದು ಸ್ವಲ್ಪ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ವೈಯುಕ್ತಿಕ ದ್ವೇಷದಿಂದ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು ಬೆಂಕಿ ಹಚ್ಚಿ ವಿಕೃತಿ ಮೆರೆದವರಿಗಾಗಿ ಪೊಲೀಸರು ಶೋಧಿಸುತ್ತಿದ್ದಾರೆ. ಈ ಕುರಿತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - – – -.