ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು… ಮೈಸೂರು,ಫೆ,19,2020(..): ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಬನ್ನೂರು-ಮಳವಳ್ಳಿ ರಸ್ತೆಯಲ್ಲಿ ಅಪಘಾತದಲ್ಲಿ ಈ ಘಟನೆ ನಡೆದಿದೆ. ಬನ್ನೂರು ಗ್ರಾಮದ ನಿವಾಸಿ ಸಿದ್ದಪ್ಪ ಮೃತಪಟ್ಟ ಬೈಕ್ ಸವಾರ. ಬೈಕ್ ನಲ್ಲಿ ತೆರಳುತ್ತಿದ್ದ ಸಿದ್ಧಪ್ಪ ಲಾರಿ ಚಕ್ರಕ್ಕೆ ಸಿಲುಕಿದ್ದು ಲಾರಿ ಸಿದ್ಧಪ್ಪನ ಮೇಲೆ ಹರಿದಿದೆ. ಈ ವೇಳೆ ಸಿದ್ದಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದು ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಲಾರಿ ಕೇರಳ ನೋಂದಣಿಯದ್ದಾಗಿದ್ದು ಈ ಕುರಿತು ಬನ್ನೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. : - - – – .