ಸಾವು ಬದುಕಿನ ನಡುವೆ ನಟ ಕಿಲ್ಲರ್ ವೆಂಕಟೇಶ್ ಹೋರಾಟ, ಚಿಕಿತ್ಸೆಗೂ ಹಣವಿಲ್ಲದೇ ಪರದಾಟ ಬೆಂಗಳೂರು, ಫೆಬ್ರವರಿ 19, 2020 (..): ಸಾವು ಬದುಕಿನ ನಡುವೆ ನಟ ಕಿಲ್ಲರ್ ವೆಂಕಟೇಶ್ ಹೋರಾಟ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಈ ಕಲಾವಿದ ಇಂದು ಅವಕಾಶಗಳೇ ಇಲ್ಲದೆ ಕುಳಿತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಕಿಲ್ಲರ್ ವೆಂಕಟೇಶ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅವರ ಪರಿಸ್ಥಿತಿಯ ಬಗ್ಗೆ ನಟ ಜಗ್ಗೇಶ್ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಟ ಕಿಲ್ಲರ್ ವೆಂಕಟೇಶ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆಗೆ ಹಣದ ಅಗತ್ಯ ಕೂಡ ಇದೆ. ಒಂದು ಕಡೆ ಸಾವು ಬದುಕಿನ ನಡುವೆ ವೆಂಕಟೇಶ್ ಹೋರಾಡುತ್ತಿದ್ದರೆ, ಅವರ ಕುಟುಂಬ ಆಸ್ಪತ್ರೆಗೆ ಹಣ ಕಟ್ಟಲು ಒದ್ದಾಡುತ್ತಿದ್ದಾರೆ. ಜಗ್ಗೇಶ್ ಚಿಕಿತ್ಸೆ ನೆರವು ನೀಡಿ ಮತ್ತಷ್ಟು ಮಂದಿ ನೆರವು ನೀಡುವಂತೆ ಕೋರಿದ್ದಾರೆ.