ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಚಾಲಕ, ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಅರ್ಜಿ ಆಹ್ವಾನ.. ಬೆಂಗಳೂರು,ಫೆ,18,2020(..): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚಾಲಕ , ಚಾಲಕ-ಕಂ-ನಿರ್ವಾಹಕ, ದರ್ಜೆ-3 ಹುದ್ದೆಗಳನ್ನ ನೇರನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. 1200 ಚಾಲಕ ಹುದ್ದೆಗಳು ಮತ್ತು 2545 ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲು ಅರ್ಜಿಯನ್ನ ಆಹ್ವಾನಿಸಿದೆ. 24-2-2020ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು 20-3-2020 ಸಂಜೆ 5 ಗಂಟೆ ಒಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 23-3-2020ರೊಳಗೆ ಅಂಚೆಕಚೇರಿಯಲ್ಲಿ ಶುಲ್ಕ ಪಾವತಿಸಬೇಕು. ಶುಲ್ಕ, ವಯೋಮಿತಿ, ಅರ್ಹತೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು....inವೆಬ್ ಸೈಟ್ ಗೆ ಭೇಟಿ ನೀಡಿ : – – - -