ಕೊಡವ ಭಾಷೆಗೆ ವಿಶೇಷ ಸ್ಥಾನಮಾನ ಮತ್ತು ಕೊಡವ ಸಮಾಜವನ್ನು ಎಸ್ ಟಿಗೆ ಸೇರಿಸುವಂತೆ ಒತ್ತಾಯ… ಮೈಸೂರು,ಫೆ,17,2020(,.): ಕೊಡವ ಭಾಷೆಗೆ ವಿಶೇಷ ಸ್ಥಾನಮಾನ ಹಾಗೂ ಕೊಡವ ಸಮಾಜವನ್ನು ಎಸ್ ಟಿ ಗೆ ಸೇರಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯಿಸಿದೆ. ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ನಡದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದ್ದಿಗೋಷ್ಠಿ ಕೊಡವ ಸಮಾಜದ ಕಲಿಯಂಡ ಪ್ರಕಾಶ್, ಕೊಡವರ ಸಂಸ್ಕೃತಿ, ಆಚಾರ, ವಿಚಾರ ಎಲ್ಲವೂ ವಿಭಿನ್ನವಾಗಿದ್ದು ಅಸ್ಸಾಂನ ಬುಡಕಟ್ಟು ಜನಾಂಗಕ್ಕೆ ವಿಶೇಷ ಸ್ಥಾನಮಾನ ಹಾಗೂ ಮೀಸಲಾತಿ ಕಲ್ಪಿಸಿದಂತೆ ಕೊಡವ ಸಮಾಜಕ್ಕೂ ನೀಡುವಂತೆ ಒತ್ತಾಯಿಸಿ ಆಗ್ರಹಿಸಿದರು. ಜೊತೆಗೆ ಕೊಡವ ಭಾಷೆಯನ್ನ ಸಂವಿಧಾನ ಪರಿಚ್ಛೇದ8 ಕ್ಕೆ ಸೇರಿಸುವಂತೆ ಇದೇ ಸಂದರ್ಭದಲ್ಲಿ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಚಂಬಂಡ ಜನತ್ ಕುಮಾರ್, ಅಪ್ಪಾರಂಡ ಪೂವಣ್ಣ, ಶ್ರೀಮತಿ ರೀನಾ ಪೂವಣ್ಣ ಹಾಜರಿದ್ದರು. : - – – –