ಹೊಸ ಲೋಗೋ ನೋಡಿ ಥ್ರಿಲ್ ಆದೆ ಎಂದ ‘ಕಿಂಗ್’ ಕೊಯ್ಲಿ ಬೆಂಗಳೂರು, ಫೆಬ್ರವರಿ 15, 2019 (..): ಆರ್’ಸಿಬಿ ತಂಡದ ಹೊಸ ಲೋಗೋ ನೋಡಿರುವ ನಾಯಕ ವಿರಾಟ್ ಕೊಹ್ಲಿ ಪುಳಕಿತಗೊಂಡಿದ್ದಾರೆ. ಈ ಬಗ್ಗೆ ಕ್ಯಾಪ್ಟನ್ ಕೊಹ್ಲಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಮಾತನಾಡುವುದು ಜನರ ಕೆಲಸವಾಗಿದೆ. ನಮ್ಮ ಹೊಸ ಲೋಗೋ ನೋಡಲು ಥ್ರಿಲ್ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಇದು ನಮ್ಮ ಆಟಗಾರರು ಮೈದಾನದಲ್ಲಿ ತರುವ ದಿಟ್ಟ ಹೆಮ್ಮೆ ಹಾಗೂ ಚಾಲೆಂಜರ್ ಮನೋಭಾವವನ್ನು ಸಾಕಾರಗೊಳಿಸುತ್ತದೆ. ಹೊಸ ಐಪಿಎಲ್ ಆವೃತ್ತಿ ಆರಂಭವಾಗುವ ತನಕ ಕಾಯಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದ್ದಾರೆ. ಐಪಿಎಲ್ 2020ನೇ ಸಾಲಿಗೆ ಕಾಲಿಡುತ್ತಿರುವಂತೆಯೇ ರಾಯಲ್ ಚಾಲೆಂಜಸ್ ಬೆಂಗಳೂರು ತಂಡವು ಚೊಚ್ಚಲ ಕಿರೀಟದ ನಿರೀಕ್ಷೆಯಲ್ಲಿದೆ. ಈ ನಿಟ್ಟಿನಲ್ಲಿ ತಂಡದಲ್ಲಿ ಮಹತ್ವದ ಬದಲಾವಣೆ ತರಲಾಗಿದೆ.