2020 ಐಪಿಎಲ್’ಗೆ ಅಭ್ಯಾಸ ಶುರು ಮಾಡಿದ ಕೂಲ್ ಕ್ಯಾಪ್ಟನ್ ! ಬೆಂಗಳೂರು, ಫೆಬ್ರವರಿ 15, 2019 (..): ಧೋನಿ ಮೈದಾನಕ್ಕೆ ಮರಳಲು ಸಿದ್ಧತೆ ನಡೆಸಿದ್ದು, ಐಪಿಎಲ್ 2020 ಗಾಗಿ ಸಿದ್ಧತೆ ಚುರುಕುಗೊಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತರಬೇತಿ ಶಿಬಿರ ಮಾರ್ಚ್ 1 ರಿಂದ ಪ್ರಾರಂಭವಾಗಲಿದೆ. ಫೆಬ್ರವರಿ 29 ರಂದು ಧೋನಿ ಚೆನ್ನೈ ತಲುಪಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಮಾರ್ಚ್ 29 ರಿಂದ ಐಪಿಎಲ್ ಪ್ರಾರಂಭವಾಗಲಿದೆ. ಎರಡು ಬಾರಿ ವಿಶ್ವ ಪ್ರಶಸ್ತಿಯನ್ನು ಗೆದ್ದ ಭಾರತೀಯ ತಂಡದ ನಾಯಕರಾಗಿದ್ದ ಧೋನಿ, 2019 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ ಸೆಮಿಫೈನಲ್ ನಂತ್ರ ಯಾವುದೇ ಪಂದ್ಯದಲ್ಲಿ ಆಡಿಲ್ಲ.