ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನ: ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿ ‘ಕೈ’ ಕಾರ್ಯಕರ್ತರು ವಶಕ್ಕೆ… ಬೆಂಗಳೂರು,ಫೆ,15,2020(..): ಶಾಹೀನ್ ಶಾಲೆ ವಿರುದ್ದ ದೇಶದ್ರೋಹ ಪ್ರಕರಣ ಹಾಕಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಇಂದು ಕಾಂಗ್ರೆಸ್ ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಸುತ್ತಿದ್ದು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ನಾಯಕರನ್ನ ಪೊಲೀಸರು ವಶಕ್ಕೆ ಪಡೆದರು. ಶಾಹೀನ್ ಶಾಲೆ ವಿರುದ್ದ ದೇಶದ್ರೋಹ ಪ್ರಕರಣ ಹಾಕಿರುವುದನ್ನ ವಿರೋಧಿಸಿ ರಾಜ್ಯ ಕಾಂಗ್ರೆಸ್ ಘಟನೆ ರ್ಯಾಲಿ ನಡೆಸುತ್ತಿದ್ದು ಈ ವೇಳೆ ಪಾಲ್ಗೊಂಡಿದ್ದ ಮಾಜಿ ಸಿಎಂಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಬಿ.ಕೆ ಹರಿಪ್ರಸಾದ್, ಶಾಸಕಿ ಸೌಮ್ಯರೆಡ್ಡಿ ಸೇರಿ ಕಾಂಗ್ರೆಸ್ ,ಶಾಸಕರು ಸಂಸದರು, ಕಾರ್ಯಕರ್ತರನ್ನ ರೇಸ್ ವ್ಯೂ ಹೋಟೆಲ್ ಬಳಿ ಪೊಲೀಸರು ವಶಕ್ಕೆ ಪಡೆದರು. ರ್ಯಾಲಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸಂವಿಧಾನ ವಿರೋಧಿ ಕ್ರಮ ಕೈಗೊಂಡರೇ ನಿಮಗೆ ತಿರುಗುಬಾಣವಾಗುತ್ತದೆ. ಸಿ.ಟಿ ರವಿ, ರೇಣುಕಾಚಾರ್ಯ, ಅನಂತ್ ಕುಮಾರ್ ಹೆಗಡೆ, ಕೆಟ್ಟದಾಗಿ ಮಾತನಾಡ್ತಾರೆ. ಅವರ ಮೇಲೆ ಕೇಸ್ ಹಾಕಿದ್ದೀರಾ..? ಎಂದು ಪ್ರಶ್ನಿಸಿದರು. ಬಿಜೆಪಿ ತೊಲಗಿಸಲು ಮತ್ತೊಂದು ಸ್ವಾತಂತ್ರ ಹೋರಾಟ ಮಾಡಬೇಕಿದೆ. ಬಿಜೆಪಿಯವರನ್ನ ತೊಲಗಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು. : - - - - -