ಸದ್ದಿಲ್ಲದೇ ಬಿಡುಗಡೆಗೆ ಸಜ್ಜಾದ ಮಯೂರಿಯ ‘ಮೌನ’! ಬೆಂಗಳೂರು, ಫೆಬ್ರವರಿ 15, 2019 (..): ವಿಭಿನ್ನ ಮತ್ತು ವಿಶಿಷ್ಟ ಪ್ರಯೋಗದ ಮೂಲಕ ಸಿದ್ದವಾಗಿರುವ ಚಿತ್ರ ‘ಮೌನಂ’ ಬಿಡುಗಡೆಗೆ ಸಿದ್ಧವಾಗಿದೆ. ನಟಿ ಮಯೂರಿ, ಬಾಲಾಜಿ ಶರ್ಮಾ ಪ್ರಮುಖ ರೋಲ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಚಿತ್ರದ ಪೋಷನ್ ಪೋಸ್ಟರ್,ಟ್ರೈಲರ್,ಮೆಲೋಡಿ ಸಾಂಗ್ಸ್ ಮೂಲಕ ಟಾಕ್ ಕ್ರಿಯೇಟ್ ಮಾಡಿದೆ. ಮೌನಂ ಗೆ ಕಥೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದು ರಾಜ್ ಪಂಡಿತ್. ಹಿರಿಯ ನಟ ಅವಿನಾಶ್, ರಿತೇಶ್, ಕೆಂಪೇಗೌಡ, ಸಿಂಚನ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.