ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನ ವಿಚಾರ: ರಮೇಶ್ ಜಾರಕಿಹೊಳಿ ಪರ ಮಹೇಶ್ ಕುಮುಟಳ್ಳಿ ಬ್ಯಾಟಿಂಗ್… ಬೆಂಗಳೂರು,ಫೆ,14,2020(..): ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಮಹೇಶ್ ಕುಮುಟಳ್ಳಿ ಸಚಿವ ರಮೇಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನ ರಮೇಶ್ ಜಾರಕಿಹೊಳಿಗೆ ನೀಡಿದರೇ ಒಳ್ಳೆಯದು ಎಂದು ಮಹೇಶ್ ಕುಮುಟಳ್ಳಿ ತಿಳಿಸಿದ್ದಾರೆ. ಇನ್ನು ತಮಗೆ ನಿಗಮ ಮಂಡಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಮಹೇಶ್ ಕುಮುಟಳ್ಳಿ, ಎಂಎಸ್ ಐಎಲ್ ನಿಗಮ ಮಂಡಳಿ ಸ್ಥಾನ ನೀಡಿದ್ದರು. ಅದರೆ ನನಗೆ ಅದು ಇಷ್ಟ ಇಲ್ಲ. ಹೀಗಾಗಿ ಬೇಡ ಎಂದಿದ್ದೇನೆ. ಭೂಸೇನಾ ನಿಗಮಮಂಡಳಿ ಕೇಳಿದ್ದೇನೆ. ನಾನು ಕೇಳಿದ ನಿಗಮ ಮಂಡಳಿ ಕೊಡಲು ಸಿಎಂ ಬಿಎಸ್ ವೈ ನಿರ್ಧರಿಸುತ್ತಾರೆ ಎಂದು ಮಹೇಶ್ ಕುಮುಟಳ್ಳಿ ತಿಳಿಸಿದರು. ಉಪಚುನಾವಣೆಯಲ್ಲಿ ಗೆದ್ದ 11 ಮಂದಿ ಶಾಸಕರ ಪೈಕಿ ಮಹೇಶ್ ಕುಮುಟಳ್ಳಿಗೆ ಹೈಕಮಾಂಡ್ ನಿರ್ಧಾರದಿಂದ ಸಚಿವ ಸ್ಥಾನ ಕೈತಪ್ಪಿದ್ದು ಹೀಗಾಗಿ ಅವರಿಗೆ ಸಿಎಂ ಬಿಎಸ್ ವೈ ನಿಗಮ ಮಂಡಳಿ ಸ್ಥಾನ ನೀಡಿ ಸಮಾಧಾನ ಪಡಿಸಿದ್ದಾರೆ. : - –-- –- .