ನಾಟಕದಲ್ಲಿ ಅವಾಚ್ಯ ಶಬ್ದ ಬಳಸಿದ್ದು ಪ್ರಧಾನಿ ಮೋದಿಗಲ್ಲ: ದೇಶದ್ರೋಹಿ ಕೇಸ್ ಹಾಕಿದ್ದು ಖಂಡನೀಯ-ಮಾಜಿ ಸಿಎಂ ಸಿದ್ಧರಾಮಯ್ಯ… ಬೀದರ್,ಫೆ,2020(..): ಶಾಹೀನ್ ಶಾಲೆ ವಿರುದ್ದ ದೇಶದ್ರೋಹ ಕೇಸ್ ಹಾಕಿದ್ದು ಖಂಡನೀಯ. ನಾಟಕದಲ್ಲಿ ಅವಾಚ್ಯ ಶಬ್ದ ಬಳಸಿದ್ದು ಪ್ರಧಾನಿ ಮೋದಿ ಅವರಿಗಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ಮಾಜಿ ಸಿಎಂ ಸಿದ್ಧರಾಮಯ್ಯ ಬೀದರ್ ನ ಶಾಹೀನ್ ಶಾಲೆಗೆ ಭೇಟಿ ನೀಡಿದ್ದರು. ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಅಣತಿಯಂತೆ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಶಾಲೆಯ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿರುವುದು ಖಂಡನೀಯ. ನಾಟಕದಲ್ಲಿ ಅವಾಚ್ಯ ಶಬ್ದ ಬಳಸಿದ್ದು ಮೋದಿಗಲ್ಲ. ನಾಟಕದಲ್ಲಿ ಮಕ್ಕಳು ಬಳಸಿದ ಶಬ್ದ ಮಾನಹಾನಿಯಾಗಲ್ಲ ಎಂದು ತಿಳಿಸಿದರು. ಬಾಬರಿ ಮಸೀದಿ ಧ್ವಂಸದ ಬಗ್ಗೆ ನಾಟಕ‌ ಮಾಡಿದರೆ ದೇಶ ದ್ರೋಹವಾಗಲಿಲ್ಲ ಎಂದು ಕುಟುಕಿದರು. ಶಾಹೀನ್ ಶಾಲೆಯಲ್ಲಿ ನಾಟಕ ಮಾಡಿದರೆ ದೇಶದ್ರೋಹದ ಕೇಸ್ ಹಾಕುತ್ತಾರೆ ಇದು ಸಂವಿಧಾನ ವಿರೋಧಿ ಕೆಲಸ. ಶಾಹೀನ್ ಶಾಲೆಯ ಮೇಲೆ‌ ದೇಶದ್ರೋಹದ ‌ಪ್ರಕರಣ ಹಾಕಿದ್ದು, ಈ ಬಗ್ಗೆ‌ ಸದನದಲ್ಲಿ ಹೋರಾಟ ‌ಮಾಡಲಾಗುವುದು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ ನೀಡಿದರು. : - - - -