ನಿನೇನಾದ್ರು ನನ್ನ ವಾರ್ಡ್ ನಲ್ಲಿದ್ದಿದ್ರೆ ಚಪ್ಪಲಿ ಹಾರ ಹಾಕುತ್ತಿದ್ರು- ಅಧಿಕಾರಿಗಳ ವಿರುದ್ದ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಗರಂ… ಬೆಂಗಳೂರು,ಫೆ,14,2020(..): ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಇಂದು ಕಸ ನಿರ್ವಹಣೆ ಪರಿಶೀಲನೆ ನಡೆಸುತ್ತಿದ್ದ ವೇಳೆ ಅಧಿಕಾರಿಗಳ ವಿರುದ್ದ ಗರಂ ಆದ ಘಟನೆ ನಡೆದಿದೆ. ನಗರದ ವಾರ್ಡ್ ನಂಬರ್ 109ರಲ್ಲಿ ವಾರ್ಡ್ ಬಿವಿಕೆ ಅಯ್ಯಂಗರ್ ರಸ್ತೆಯಲ್ಲಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ರಸ್ತೆ ಬದಿ ಬಿದ್ದಿದ್ದ ರಾಶಿ ರಾಶಿ ಕಸವನ್ನ ನೋಡಿ ಗೌತಮ್ ಕುಮಾರ್ ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ. ದೇವರಾಣೆ ನೀನೇನಾದರು ನನ್ನ ವಾರ್ಡ್ ನಲ್ಲಿ ಇದ್ದಿದ್ರೆ ಚಪ್ಪಲಿ ಹಾರ ಹಾಕುತ್ತಿದ್ದರು ಎಂದು ಅಧಿಕಾರಿಗಳಿಗೆ ಮೇಯರ್ ಗೌತಮ್ ಕುಮಾರ್ ತರಾಟೆ ತೆಗೆದುಕೊಂಡರು. ಇನ್ನು ತಪಾಸಣೆ ವೇಳೆ ವಿಶೇಷ ಆಯುಕ್ತ ಗೈರಾಗಿದ್ದಕ್ಕೂ ಮೇಯರ್ ಗೌತಮ್ ಕುಮಾರ್ ಗರಂ ಆದ ಘಟನೆ ನಡೆಯಿತು. : -- -- -