ಗೋಬಿ ಮಂಚೂರಿ ನಿಷೇಧವಿಲ್ಲ: ಆದ್ರೆ ಕೆಮಿಕಲ್ ಬಳಸಿದ್ರೆ 10 ಲಕ್ಷ ರೂ ದಂಡ ಜೈಲು ಶಿಕ್ಷೆ. ಬೆಂಗಳೂರು,ಮಾರ್ಚ್,11,2024(..):ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ ಮಾರಾಟ ಮತ್ತು ಬಳಕೆಗೆ ನಿಷೇಧ ವಿಧಿಸಿದ್ದು ಗೋಬಿ ಮಂಚೂರಿಯನ್ನ ಬ್ಯಾನ್ ಮಾಡಲಾಗಿಲ್ಲ. ಆದರೆ ಗೋಬಿ ಮಂಚೂರಿಯಲ್ಲಿ ಕೆಮಿಕಲ್ ಬಳಸುವಂತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಇಂದು ವಿಕಾಸ ಸೌಧದದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಚಿವ ದಿನೇಶ್ ಗುಂಡೂರಾವ್, ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಗಡೆ ಆಹಾರ ಸೇವನೆ ಮಾಡುತ್ತಾರೆ. ಇದರಿಂದ ಕ್ಯಾನ್ಸರ್ ಹಾಗೂ ಅಸಾಂಕ್ರಮಿಕ ಖಾಯಿಲೆ ಏರಿಕೆಯಾಗುತ್ತಿದೆ. ಸರಿಯಾದ ಆಹಾರ ತಯಾರು ಮಾಡದಿರುವುದು ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ 171 ಕಡೆ ಗೋಬಿ ಮಂಚೂರಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಿದ್ದೇವೆ. ಇದರಲ್ಲಿ 107 ಮಾದರಿಯಲ್ಲಿ ಕೃತಕ ಬಣ್ಣ ಕಂಡು ಬಂದಿದೆ. 64 ಸುರಕ್ಷಿತವಾದ ಮಾದರಿಗಳು ಕಂಡು ಬಂದಿದೆ. ಟಾರ್ಟ್ರಾಜಿನ್, ಸನ್ ​ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್​ನಂತ ಕೃತಕ ಬಣ್ಣಗಳನ್ನು ಬಳಸಲಾಗಿದೆ ಇವು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಮಾಹಿತಿ ನೀಡಿದರು. ಇನ್ನು 25 ವಿಧದ ಕಾಟನ್​​ ಕ್ಯಾಂಡಿ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಈ ಪೈಕಿ 15 ಮಾದರಿಗಳಲ್ಲಿ ಕೃತಕ ಬಣ್ಣ ಬಳಸಿರುವುದು ಕಂಡು ಬಂದಿದೆ. 10ರಲ್ಲಿ ಕೃತಕ ಬಣ್ಣ ಬಳಸಿಲ್ಲ. ಕೃತಕ ಬಣ್ಣ ಬಳಕೆ ಮಾಡಿ ಕ್ಯಾಂಡಿ ತಯಾರು ಮಾಡಬಹುದು. ಆದರೆ ರೊಡಮೈನ್ ಬಿ, ಟಾರ್ಟ್ರಾಜಿನ್ ​ನಂತಹ ಯಾವುದೇ ಬಣ್ಣ ಬಳಸಬಾರದು. ಇದು ಆರೋಗ್ಯಕ್ಕೆ ಹಾನಿಕಾರಕ ಎಂದರು. ಕೃತಕ ಬಣ್ಣ ಬಳಸದೆ ತಯಾರಿಸುವ ಕಾಟನ್ ಕ್ಯಾಂಡಿಗೆ ಅವಕಾಶವಿದೆ. ಗೋಬಿ ಮಂಚೂರಿ ಕಾಟನ್ ಕ್ಯಾಂಡಿಯಲ್ಲಿ ಕೆಮಿಕಲ್ ಬಳಸುವಂತಿಲ್ಲ. ಇದು ಸಂಪೂರ್ಣ ಕಾನೂನು ಬಾಹಿರ. ಇದನ್ನು ಉಲ್ಲಂಘಿಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ 10 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. : - – - –-