ಮಹೇಶ್ ಕುಮುಟಳ್ಳಿಗೆ ಸಚಿವ ಸ್ಥಾನ ನೀಡದಿದ್ರೆ ಸಿಎಂ ಬಿಎಸ್ ವೈ ವಚನ ಭ್ರಷ್ಟರಾಗ್ತಾರೆ- ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ … ವಿಜಯಪುರ,ಫೆ,11,2020(..): ಕೊಟ್ಟ ಮಾತಿನಂತೆ ಶಾಸಕ ಮಹೇಶ್ ಕುಮುಟಳ್ಳಿಗೆ ಸಚಿವ ಸ್ಥಾನ ನೀಡದಿದ್ದರೇ ಸಿಎಂ ಬಿಎಸ್ ಯಡಿಯೂರಪ್ಪ ವಚನಭ್ರಷ್ಟರಾಗುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ವಿಜಯಪುರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಮಹೇಶ್ ಕುಮುಟಳ್ಳಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೇ ಬಿಎಸ್ ವೈ ವಚಭ್ರಷ್ಟರಾಗುತ್ತಾರೆ. ಈ ಹಿಂದೆ ಹೆಚ್.ಡಿಕೆ ವಚನ ಬ್ರಷ್ಟ ಎಂದು ಟೀಕಿಸುತ್ತಿದ್ದರು. ಈಗ ಜನ ನಮ್ಮನ್ನ ಟೀಕಿಸುತ್ತಾರೆ. ಹೀಗಾಗಿ ಕುಮುಟಳ್ಖಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು. ಡಿ.ಕೆ ಶಿವಕುಮಾರ್ ಮತ್ತು ಸಚಿವ ರಮೇಶ್ ಜಾರಕಿಹೊಳಿ ನಡುವಿನ ಮನಸ್ತಾಪ ಕುರಿತು ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿಗೆ ಅಪಮಾನವಾಗಿತ್ತು. ಹೀಗಾಗಿ ಈಗ ಸೇಡು ತೀರಿಸಿಕೊಂಡಿದ್ದಾರೆ. ಡಿಕೆಶಿಯ ಮುಂದೆ ತಾನು ಏನೆಂದು ರಮೇಶ್ ಜಾರಕಿಹೊಳಿ ತೋರಿಸಬೇಕಿತ್ತು. ಅದ್ದರಿಂದ ಡಿಕೆ ಶಿವಕುಮಾರ್ ಗೆ ಈ ಹಿಂದೆ ನೀಡಿದ್ದ ಖಾತೆಯನ್ನ ಪಡೆದಿದ್ದಾರೆ. ಯಾರಿಗೆ ಆಗಲಿ ಜಿದ್ದು ಇದ್ದೇ ಇರುತ್ತೆ. ಹೀಗಾಗಿ ಡಿಕೆಶಿ ವಿರುದ್ದ ರಮೇಶ್ ಸೇಡು ತೀರಿಸಿಕೊಂಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು. : - - – - - - .