ದೇವರು ಆಶೀರ್ವಾದ ಮಾಡಿದ್ರೆ ಮುಖ್ಯಮಂತ್ರಿ ಆಗ್ತೀನಿ- ಹಿರಿಯ ಶಾಸಕ ಉಮೇಶ್ ಕತ್ತಿ ಇಂಗಿತ ಹುಕ್ಕೇರಿ,ಫೆ,10,2020(..): ಯಡಿಯೂರಪ್ಪ ಇರುವ ಸ್ಥಾನ ಸಿಗುವ ದಿಕ್ಕಿನಲ್ಲಿ ಪ್ರಯತ್ನ ಪಡುತ್ತೇನೆ. ದೇವರು ಆಶೀರ್ವಾದ ಮಾಡಿದರೇ ಮುಖ್ಯಮಂತ್ರಿ ಆಗ್ತೀನಿ ಎಂದು ಹಿರಿಯ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ. ಸಚಿವ ಸ್ಥಾನ ಕುರಿತು ಚಿಕ್ಕೋಡಿಯಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಈಗಾಗಲೇ ನಾನು 13 ವರ್ಷ ಮಂತ್ರಿಯಾಗಿದ್ದೇನೆ. ಹೊಸಬರಿಗೆ ಅವಕಾಶ ನೀಡಲು ನಮ್ಮನ್ನ ಕೈಬಿಟ್ಟಿರಬಹುದು.ಮುಂದೆ ಮಂತ್ರಿಯಾಗಬಹುದು ನೋಡೋಣ ಎಂದರು. ಸೋತ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಉಮೇಶ್ ಕತ್ತಿ, ನನಗೆ ಅನುಭವ ಕಡಿಮೆ ಇದೆ. ಅವರಿಗೆ ಹೆಚ್ಚು ಇದೆ. ಹೊಸಬರಿಗೆ ಅವಕಾಶ ನೀಡಲು ಕೈಬಿಟ್ಟಿರಬಹುದು.ನನಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಯಾವುದೇ ಬೇಸರವಿಲ್ಲ. ಹುಕ್ಕೇರಿ ಕ್ಷೇತ್ರದ ಶಾಸಕನಾಗಿ ಕೆಲಸ ಮಾಡುವೆ ಎಂದು ಸ್ಪಷ್ಟನೆ ನೀಡಿದರು. ಹಾಗೆಯೇ ಸಿಎಂ ಬಿಎಸ್ ವೈ ಜತೆ ಮುನಿಸು ಕುರಿತು ಮಾತನಾಡಿದ ಶಾಸಕ ಉಮೇಶ್ ಕತ್ತಿ, ನನ್ನ ಪತ್ನಿಯ ಜತೆಯೇ ನಾನು ಮುನಿಸಿಕೊಳ್ಳುವುದಿಲ್ಲ. ಇನ್ನು ಸಿಎಂ ಬಿಎಸ್ ಯಡಿಯೂರಪ್ಪ ಬಳಿ ಮುನಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. : - – - -