ಕೆಜಿಎಫ್ ಟೀಂ ಸೇರಿದ ರವೀನಾ ಟಂಡನ್ ಬೆಂಗಳೂರು , ಫೆಬ್ರವರಿ 10, 2020 (..):ಕೆಜಿಎಫ್ ಚಾಪ್ಟರ್ 2 ಅಂಗಳಕ್ಕೆ ಬಾಲಿವುಡ್ ಬೆಡಗಿ ರವೀನಾ ಟಂಡನ್ ಎಂಟ್ರಿ ನೀಡಿದ್ದಾರೆ. ಚಿತ್ರತಂಡ ಟ್ವಿಟ್ಟರ್‍ನಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ರವೀನಾ ಟಂಡನ್ ನಿಂತಿರುವ ಫೋಟೋವನ್ನು ಹಂಚಿಕೊಂಡು ಸ್ವಾಗತ ಕೋರಿದೆ. ಮೊದಲು ಎಕ್ಸೆಲ್ ಎಂಟರ್ ಟೈನ್‍ಮೆಂಟ್ ಟ್ವಿಟ್ಟರ್ ನಲ್ಲಿ ರವೀನಾ ಮತ್ತು ಪ್ರಶಾಂತ್ ನೀಲ್ ಜೊತೆಗಿನ ಫೋಟೋ ಹಂಚಿಕೊಂಡು, ಡೆತ್ ವಾರೆಂಟ್ ಜಾರಿ ಮಾಡಲು ಬಂದ ಶಕ್ತಿಶಾಲಿ ಮಹಿಳೆಗೆ ಕೆಜಿಎಫ್ -2 ಸಿನಿಮಾ ಅಂಗಳಕ್ಕೆ ಸ್ವಾಗತ ಎಂದು ಬರೆದು ಚಿತ್ರತಂಡದ ಇತರರಿಗೂ ಟ್ಯಾಗ್ ಮಾಡಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರ್, ರಾಷ್ಟ್ರೀಯ ಪ್ರಶಸ್ತಿ ವಿಜೇತ ರವೀನಾ ಟಂಡನ್ ಅವರಿಗೆ ಆತ್ಮೀಯ ಸ್ವಾಗತ ಎಂದು ಬರೆದುಕೊಂಡಿದ್ದಾರೆ.