ಮೈಸೂರಿನ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸ್ಥಾನ ಕೊಡಲೇ ಬೇಕು-ಶಾಸಕ ಎಸ್.ಎ ರಾಮದಾಸ್… ಮೈಸೂರು,ಫೆ,9,2020(..): ಮೈಸೂರಿನ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸ್ಥಾನ ಕೊಡಲೇ ಬೇಕು. ಸಿಎಂ ಬಿಎಸ್ ಯಡಿಯೂರಪ್ಪ ಮೈಸೂರಿಗೆ ಪ್ರಾಧಿನಿತ್ಯ ಕೊಡ್ತಾರೆ ಎಂಬ ವಿಶ್ವಾಸ ಇದೆ ಎಂದು ಮಾಜಿ ಸಚಿವ ಎಸ್.ಎ ರಾಮದಾಸ್ ತಿಳಿಸಿದರು. ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ನಾನು ಅನ್ಯ ಮಾರ್ಗದಲ್ಲಿ ಅಥವಾ ಒತ್ತಡದ ರಾಜಕೀಯ ಮಾಡಿ ಸಚಿವನಾಗಲ್ಲ. ಸೂಕ್ತ ಸಮಯದಲ್ಲಿ ಯಡಿಯೂರಪ್ಪನವರು ಸೂಕ್ತ ನಿರ್ಣಯ ತೆಗೆದುಕೊಳ್ತಾರೆ. ಮೈಸೂರಿಗೆ ಪ್ರಾಧಿನಿತ್ಯ ಕೊಡ್ತಾರೆ ಎಂಬ ವಿಶ್ವಾಸ ಇದೆ. ಮೈಸೂರಿನ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸ್ಥಾನ ಕೊಡಲೇ ಬೇಕು. ಹಸಿದು ಬಂದವರಿಗೆ ಹೊಟ್ಟೆ ತುಂಬಿಸುವ ಕೆಲಸ ಆಗಿದೆ. ಈಗ ಹಿರಿಯರನ್ನ ಗಣನೆಗೆ ತೆಗೆದುಕೊಂಡು ಸಚಿವ ಸ್ಥಾನ ಕೊಡಬೇಕಿದೆ ಎಂದು ಹೇಳಿದರು. ಪರೋಕ್ಷವಾಗಿ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದ ರಾಮದಾಸ್, ಸಿಎಂ ಬಿಎಸ್ ವೈ ಹಿರಿಯರನ್ನ ಗಮನಕ್ಕೆ ತೆಗೆದುಕೊಳ್ಳುವ ವಿಶ್ವಾಸ ಇದೆ. ಪಕ್ಷ ಸಂಘಟನೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಮೈಸೂರಿಗೆ ಸಚಿವ ಸ್ಥಾನ ಬೇಕಿದೆ. ಮೈಸೂರು ಕಡೆಗಣನೆ‌ ಆಗಿದೆ ಎಂಬುದು ಜನಸಾಮಾನ್ಯರಿಗು ಗೊತ್ತಿದೆ. ಯಾರಿಗಾದರು ಕೊಡಲಿ ಆದರೆ ಪಕ್ಷದ ಹಿರಿಯರನ್ನ ಗಣನೆಗೆ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು. : – – – –