ಮಿನಿ ಬಸ್ ಚಾಲಕನಿಂದ ಸರಣಿ ಅಪಘಾತ: ಮೂವರಿಗೆ ಗಾಯ…. ಬೆಂಗಳೂರು,ಫೆ,10,2020(..): ಕುಡಿದ ಅಮಲಿನಲ್ಲಿ ಮಿನಿ ಬಸ್ ಚಾಲಕನಿಂದ ಸರಣಿ ಅಪಘಾತ ಸಂಭವಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಯಶವಂತಪುರದ ರೈಲ್ವೆ ನಿಲ್ದಾಣದ ಈ ಘಟನೆ ನಡೆದಿದೆ. ಮಿನಿ ಬಸ್ ಮೂರು ಆಟೋಗಳಿಗೆ ಡಿಕ್ಕಿಯಾಗಿದ್ದು ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡಿರುವವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಿನಿಬಸ್ ಚಾಲಕ ವೆಂಕಟಸ್ವಾಮಿ ಮದ್ಯದ ಅಮಲಿನಲ್ಲಿ ಈ ಅವಾಂತರ ಸೃಷ್ಟಿಸಿದ್ದಾನೆ ಎನ್ನಲಾಗಿದೆ. ಚಾಲಕ ವೆಂಕಟಸ್ವಾಮಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಈ ಕುರಿತು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - - - - – .