ಗುಜರಿಯಲ್ಲಿ ಅಗ್ನಿ ಅವಘಡ: ಸ್ಥಳಕ್ಕೆ ಮೈಸೂರು ಮೇಯರ್ ಭೇಟಿ ಪರಿಶೀಲನೆ… ಮೈಸೂರು,ಫೆ,9,2020(..): ನಗರದ ಬನ್ನಿಮಂಟಪದ ನೂರ್ ಮಸೀದಿ ಬಳಿಯ ಗುಜರಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು ಸ್ಥಳಕ್ಕೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನಿಂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಡರಾತ್ರಿ ನೂರ್ ಮಸೀದಿ ಬಳಿ ಇರುವ ಗುಜರಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿತ್ತು. ಈ ಹಿನ್ನೆಲೆ ಇಂದು ಘಟನಾ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಮೇಯರ್ ತಸ್ನಿಂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿ ಅವಘಡ ವೇಳೆ ಪ್ಲಾಸ್ಟಿಕ್ ಪದಾರ್ಥಗಳು ಸುಟ್ಟು ಭಸ್ಮವಾಗಿದ್ದು, ಸ್ಥಳಕ್ಕೆ ಆಗಮಿಸಿದ 5 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು. ಇದೀಗ ಬೆಂಕಿ ನಂದಿಸಲಾಗಿದ್ದು ಇಂದು ಬೆಳಗ್ಗೆಯಿಂದ ಸ್ವಚ್ಚತಾ ಕಾರ್ಯ ನಡೆಯಿತು. ಇನ್ನು ಸ್ಥಳಕ್ಕೆ ಎನ್.ಆರ್.ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. : –- - – - –