ಎಚ್.ಡಿ ಕೋಟೆಯಲ್ಲಿ ಶಾಲೆಗೆ ತೆರಳಿದ್ದ ಇಬ್ಬರು ಮಕ್ಕಳು ನಾಪತ್ತೆ… ಮೈಸೂರು,ಫೆ,7,2020(..): ಶಾಲೆಗೆ ತೆರಳಿದ್ದ ಇಬ್ಬರು ಮಕ್ಕಳು ನಾಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ. ಇಬ್ಬರು ಮಕ್ಕಳು ನಾಪತ್ತೆ. ಹೆಚ್.ಡಿ ಕೋಟೆ ತಾಲ್ಲೂಕಿನ ವಡ್ಡರಗುಡಿ ಗ್ರಾಮದ ಭರತ್ ಹಾಗೂ ಸೀನ ಕಾಣೆಯಾದ ಮಕ್ಕಳು. ಇಬ್ಬರು ಮಕ್ಕಳು ಎಚ್ ಡಿ ಕೋಟೆ ಪಟ್ಟಣದ ಸೆಂಟ್ ಮೇರೀಸ್ ಶಾಲೆಯಲ್ಲಿ 6 ನೇ ತರಗತಿಯಲಿ ವ್ಯಾಸಾಂಗ ಮಾಡುತ್ತಿದ್ದರು. ಈ ನಡುವೆ ನಿನ್ನೆ ಬೆಳಗ್ಗೆ ಪೋಷಕರು ಇಬ್ಬರು ಮಕ್ಕಳನ್ನ ಶಾಲೆ ಕಳುಹಿಸಿದ್ದರು. ಎಂದಿನಂತೆ ಭರತ್ ಮತ್ತು ಸೀನ ಆಟೋದಲ್ಲಿ ತೆರಳಿ ಶಾಲೆ ಬಳಿ ಇಳಿದುಕೊಂಡಿದ್ದರು. ಆದರೆ ಇಬ್ಬರು ಮಕ್ಕಳು ಗುರುವಾರ ಬೆಳಗ್ಗೆ ಶಾಲೆಗೆ ಹಾಜರಾಗಿರಲಿಲ್ಲ. ಇನ್ನು ಸಂಜೆಯೂ ಮನೆಗೆ ವಾಪಸ್ಸಾಗಿಲ್ಲ. ಹೀಗಾಗಿ ಮಕ್ಕಳು ವಾಪಸ್ಸಾಗದ ಹಿನ್ನೆಲೆ ಗಾಬರಿಗೊಂಡ ಪೋಷಕರಿಂದ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಎಚ್ ಡಿ ಕೋಟೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. : – – -