ಮುಂದಿನ ಸಂಪುಟ ವಿಸ್ತರಣೆಯಲ್ಲಾದ್ರೂ ನನಗೆ ಅವಕಾಶ ಕಲ್ಪಿಸಿ- ಸಿಎಂ ಬಿಎಸ್ ವೈಗೆ ಶಾಸಕ ಅರಗ ಜ್ಞಾನೇಂದ್ರ ಮನವಿ… ಬೆಂಗಳೂರು,ಫೆ,7,2020(..): ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆಯಾಗಿ 10 ಮಂದಿ ನೂತನ ಸಚಿವರು ನಿನ್ನೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ನಡುವೆ ಅಸಮಾಧಾನ ಹೆಚ್ಚಾದ ಹಿನ್ನೆಲೆ ಮೂಲ ಬಿಜೆಪಿಗರಿಗೆ ಮೀಸಲಿಟ್ಟಿದ್ದ ಮೂರು ಸಚಿವ ಸ್ಥಾನ ಭರ್ತಿಯನ್ನ ಬಿಜೆಪಿ ಹೈಕಮಾಂಡ್ ಮುಂದೂಡಿದ್ದರೂ ಸಚಿವಕಾಂಕ್ಷಿಗಳ ಒತ್ತಡ ಇನ್ನೂ ನಿಂತಿಲ್ಲ. ಈ ನಡುವೆ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಾದರೂ ತನಗೆ ಸಚಿವ ಸ್ಥಾನ ನೀಡುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ. ಇಂದು ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾದ ಶಾಸಕ ಅರಗ ಜ್ಞಾನೇಂದ್ರ ತಮಗೂ ಮಂತ್ರಿಗಿರಿ ನೀಡುವಂತೆ ಆಗ್ರಹಿಸಿದ್ದಾರೆ. ಮುಂದಿನ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಾದರೂ ತನಗೆ ಅವಕಾಶ ಕಲ್ಪಿಸಿ. ಉಳಿದ ಆರು ಸಚಿವ ಸ್ಥಾನಗಳ ಭರ್ತಿ ವೇಳೆ ತನ್ನನ್ನೂ ಪರಿಗಣಿಸುವಂತೆ ಅರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ. : – - - - -