ನೂತನ ಸಚಿವರಿಗೆ ಕೊಠಡಿಗಳ ಹಂಚಿಕೆ ಮಾಡಿ ಸರ್ಕಾರ ಆದೇಶ: ಡಿಕೆ ಶಿವಕುಮಾರ್ ಇದ್ದ ಕೊಠಡಿಗೆ ಪಟ್ಟು ಹಿಡಿದಿದ್ದ ರಮೇಶ್ ಜಾರಕಿಹೊಳಿಗೆ ನಿರಾಸೆ… ಬೆಂಗಳೂರು,ಫೆ,6,2020(..): ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆಯಾಗಿದ್ದು ನೂತನ 10 ಸಚಿವರಿಗೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೊಠಡಿಗಳನ್ನ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೂತನ 10 ಸಚಿವರು ಸಂಪುಟಕ್ಕೆ ಸೇರ್ಪಡೆಯಾದ ಹಿನ್ನೆಲೆ ಇದೀಗ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ 28ಕ್ಕೆ ಏರಿಕೆಯಾಗಿದೆ. ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 6 ಸಚಿವರಿಗೆ ವಿಧಾನಸೌಧದಲ್ಲಿ ಉಳಿದ 4 ಸಚಿವರಿಗೆ ವಿಕಾಸ ಸೌಧದಲ್ಲಿ ಕೊಠಡಿ ಹಂಚಿಕೆ ಮಾಡಲಾಗಿದೆ. ಈ ಹಿಂದೆ ಡಿಕೆ ಶಿವಕುಮಾರ್ ಸಚಿವರಾಗಿದ್ದಾಗ ನೀಡಿದ್ದ ಕೊಠಡಿ ಸಂಖ್ಯೆ 336 ಅನ್ನ ತನಗೆ ನೀಡುವಂತೆ ಸಚಿವ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಆದರೆ ಅಂತಿಮವಾಗಿ ರಮೇಶ್ ಜಾರಕಿಹೊಳಿಗೆ 342 /342ಎ ಕೊಠಡಿಯನ್ನ ನೀಡಲಾಗಿದೆ. ನೂತನ ಸಚಿವರ ವಿಧಾನಸೌಧ, ವಿಕಾಸ ಸೌಧದ ಕೊಠಡಿ ಸಂಖ್ಯೆ ಹೀಗಿದೆ ನೋಡಿ… ನೂತನ ಸಚಿವರಿಗೆ ನೀಡಲಾದ ವಿಧಾನಸೌಧದ ಕೊಠಡಿ ಸಂಖ್ಯೆ ರಮೇಶ್ ಜಾರಕಿಹೊಳಿ -ಕೊಠಡಿ ಸಂಖ್ಯೆ 342/342A ಡಾ.ಕೆ.ಸುಧಾಕರ್ -ಕೊಠಡಿ ಸಂಖ್ಯೆ 339/339A ಕೆ ಗೋಪಾಲಯ್ಯ- ಕೊಠಡಿ ಸಂಖ್ಯೆ 252/252A ಭೈರತಿ ಬಸವರಾಜ್- ಕೊಠಡಿ ಸಂಖ್ಯೆ 337/337A ಶಿವರಾಂ ಹೆಬ್ಬಾರ್- ಕೊಠಡಿ ಸಂಖ್ಯೆ 258/258A ಶ್ರೀಮಂತ ಪಾಟೀಲ್- ಕೊಠಡಿ ಸಂಖ್ಯೆ 301/301A ನಾಲ್ವರು ನೂತನ ಸಚಿವರಿಗೆ ನೀಡಲಾದ ವಿಕಾಸಸೌಧದ ಕೊಠಡಿ ಸಂಖ್ಯೆಗಳು ಎಸ್ ಟಿ ಸೋಮಶೇಖರ್ ಕೊಠಡಿ ಸಂಖ್ಯೆ 38/39 ಬಿಸಿ ಪಾಟೀಲ್ ಕೊಠಡಿ ಸಂಖ್ಯೆ 406/407 ನಾರಾಯಣಗೊಡ ಕೊಠಡಿ ಸಂಖ್ಯೆ 234/235 ಆನಂದ್ ಸಿಂಗ್ ಕೊಠಡಿ ಸಂಖ್ಯೆ 36/37 : - – –- - .