ಕಾರಿನ ಗಾಜು ಒಡೆದು ಒಂದು ಲಕ್ಷ ನಗದು ದೋಚಿದ ಕಳ್ಳರು… ಮೈಸೂರು,ಫೆ,5,2020(..): ಕಾರಿನ ಗಾಜು ಒಡೆದು ದರೋಡೆಕೋರರು ಒಂದು ಲಕ್ಷ ನಗದನ್ನ ಕಸಿದು ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಉದ್ಯಮಿ ಅಣ್ಣಪ್ಪ ಅವರ ಸಿಫ್ಟ್ ಕಾರಿನಿಂದ ಕಳ್ಳತನ ಮಾಡಿದ್ದಾರೆ. ಅಣ್ಣಪ್ಪ ಸಿಂಡಿಕೇಟ್ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಕಾರಿನಲ್ಲಿಟ್ಟಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಕಾರಿನ ಗಾಜು ಒಡೆದು ಒಂದು ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ‌ ಸೆರೆಯಾಗಿದೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. : –- – ’ -