ರಾಜಮೌಳಿ ನೋಡಲು 2021ರವರೆಗೆ ಕಾಯ್ಬೇಕು ! ಬೆಂಗಳೂರು, ಫೆಬ್ರವರಿ 6, 2019 (..):ಬಹುನಿರೀಕ್ಷಿತ ಚಿತ್ರದ ಹೊಸ ರಿಲೀಸ್​ ದಿನಾಂಕವನ್ನು ನಿರ್ದೇಶಕ ರಾಜಮೌಳಿ ಪ್ರಕಟಿಸಿದ್ದಾರೆ. 2021ರ ಜನವರಿ 8ಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಟ್ವೀಟ್​ ಮಾಡಿದೆ. ‘ಬಾಹುಬಲಿ’ ಸಿನಿಮಾದ ನಂತರ ಸ್ಟಾರ್ ನಿರ್ದೇಶಕ ಎಸ್​.ಎಸ್​. ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾ ‘’. ರಾಜಮೌಳಿ ಅವರ ನಿರ್ದೇಶನ ಇರುವ ಕಾರಣಕ್ಕೆ ಈ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಮೊದಲ ಬಾರಿಗೆ ಜೂನಿಯರ್​ ಎನ್​ಟಿಆರ್ ಹಾಗೂ ರಾಮ್​ಚರಣ್​ ತೇಜ ಈ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇಂತಹ ಬಹುನಿರೀಕ್ಷಿತ ಸಿನಿಮಾ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.