ಕೊರೋನ ವೈರಸ್ ಭೀತಿ ಹಿನ್ನೆಲೆ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾಸ್ಕ್ ಗಳ‌ ಮೊರೆ ಹೋದ ಜನತೆ… ಮೈಸೂರು,ಫೆ,4,2020(..): ಕೆರಳದಲ್ಲಿ ಕೊರೋನ ವೈರೆಸ್ ಪತ್ತೆ ಹಿನ್ನೆಲೆ, ಕೊರೋನ ಭೀತಿಯಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ಜನತೆ ಇದೀಗ ಮಾಸ್ಕ್ ಗಳ‌ ಮೊರೆ ಹೋಗಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾಸ್ಕ್ ಗಳಿಗೆ ಬಾರಿ ಬೇಡಿಕೆ ಉಂಟಾಗಿದೆ. ಕೊರೋನ ವೈರಸ್ ನಿಂದ ಪಾರಾಗಲು ಮುಂಜಾಗ್ರತಾ ಕ್ರಮವಾಗಿ ಮೈಸೂರು ಜನತೆ ಮೆಡಿಕಲ್ ಶಾಪ್ ಗಳತ್ತ ತೆರಳಿ ಮಾಸ್ಕ್ ಖರೀದಿಸಲು ಮುಂದಾಗಿದ್ದಾರೆ. ಮಾಸ್ಕ್ ಕೊಳ್ಳುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಮಾಸ್ಕ್ ಗಳ ರೇಟ್ ಕೂಡ ಏರಿಕೆ ಮಾಡಿದ್ದಾರೆ. ಕೊರೋನ ಭೀತಿಯಿಂದಾಗಿ ಮಾಸ್ಕ್ ಗಳ ಬೇಡಿಕೆ ಹೆಚ್ಚಾಗಿದ್ದು ಮಾಸ್ಕ್ ಬೆಲೆಯನ್ನ 30ರಿಂದ 40ರೂ ಗೆ ದರ ಹೆಚ್ಚಳ ಮಾಡಲು ಮೆಡಿಕಲ್ ಸ್ಟೋರ್ ಮಾಲೀಕರು ಮುಂದಾಗಿದ್ದಾರೆ. : --- –-