ಈಶ್ವರಪ್ಪ ನನ್ನ ಜೊತೆ ಬರಲಿ: ಕಾಂತೇಶ್ ಗೆ ಟಿಕೆಟ್ ಕೊಡಿಸುವ ಪ್ರಯತ್ನ ಮಾಡುತ್ತೇನೆ- ಬಿಎಸ್ ಯಡಿಯೂರಪ್ಪ. ಶಿವಮೊಗ್ಗ,ಮಾರ್ಚ್,10,2024(..):ಕೆ.ಎಸ್ ಈಶ್ವರಪ್ಪ ದೆಹಲಿಗೆ ನನ್ನ ಜೊತೆ ಬರಲಿ. ಕಾಂತೇಶ್ ಗೆ ಟಿಕೆಟ್ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಬಿಎಸ್ ಯಡಿಯೂರಪ್ಪ, ನನ್ನ ಜೊತೆ ಈಶ್ವರಪ್ಪ ಬಂದರೆ ದೆಹಲಿಗೆ ಕರೆದೊಯ್ಯುತ್ತೇನೆ. ದೆಹಲಿಯಲ್ಲಿ ಅಮಿತ್ ಶಾ ಜೊತೆ ಚರ್ಚಿಸೋಣ ನನ್ನ ಜೊತ ಈಶ್ವರಪ್ಪ ಬರಲಿ. ಕಾಂತೇಶ್ ಗೆ ಟಿಕೆಟ್ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು. ನಾನು ಬೇರೆ ಅಲ್ಲ, ಈಶ್ವರಪ್ಪ ಬೇರೆ ಅಲ್ಲ. ನಾನೇ ಖುದ್ದಾಗಿ ಅವರ ಜೊತೆ ನಿಲ್ಲುತ್ತೇನೆ. ನಿನ್ನೆ ಅವರ ಮನೆಗೆ ಪ್ರಹ್ಲಾದ್ ಜೋಶಿಯನ್ನ ಕಳುಹಿಸಿದ್ದೆ ಎಂದು ಬಿಎಸ್ ವೈ ತಿಳಿಸಿದರು. : – - – - – – .