ನಟ ದರ್ಶನ್ ಭೇಟಿ ಮಾಡಿದ ತಾಯಿ ಮೀನಾ ತೂಗದೀಪ ಬಳ್ಳಾರಿ,ಸೆಪ್ಟಂಬರ್,19,2024 (..):ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ರನ್ನ ಅವರ ತಾಯಿ ಮೀನಾ ತೂಗದೀಪ ಮತ್ತು ಕುಟುಂಬಸ್ಥರು ಭೇಟಿಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಈ ಮಧ್ಯೆ ತಾಯಿ ಮೀನಾ ತೂಗುದೀಪ್ ಜೊತೆ ದರ್ಶನ್ ಸಹೋದರಿ, ಭಾವ ಕೂಡ ಬಳ್ಳಾರಿ ಜೈಗೆ ಆಗಮಿಸಿದ್ದು, ದರ್ಶನ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸಂದರ್ಶಕರ ಕೊಠಡಿಯಲ್ಲಿ ನಟ ದರ್ಶನ್ ರನ್ನು ಕುಟುಂಬಸ್ಥರು ಭೇಟಿಯಾಗಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪತ್ನಿ ವಿಜಯಲಕ್ಷ್ಮೀ ಭೇಟಿಯಾದಾಗ ಅಮ್ಮ ಬರಲಿಲ್ವಾ? ಎಂದು ನಟ ದರ್ಶನ್ ಕೇಳುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ಇಂದು ತಾಯಿ ಮೀನಾ ತೂಗುದೀಪ್ ಭೇಟಿಯಾಗಿದ್ದಾರೆ. : , , ,