ಸಿಎಂ ಕುರ್ಚಿ ಅಲ್ಲಾಡುತ್ತಿದೆ ಎಂದ ಬಿವೈ ವಿಜಯೇಂದ್ರಗೆ ಸಚಿವ ಎಂ.ಬಿ ಪಾಟೀಲ್ ತಿರುಗೇಟು ವಿಜಯಪುರ,ಸೆಪ್ಟಂಬರ್,19,2024 (..):ಎಐಸಿಸಿ ಅಧ್ಯಕ್ಷರನ್ನ ಮೆಚ್ಚಿಸಲು ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಸಿಎಂ ಕುರ್ಚಿ ಅಲುಗಾಡುತ್ತಿದೆ ಎಂದು ಟೀಕಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಗಟ್ಟಿ ಇದ್ದಾರೆ. ಸಿಎಂ ಕುರ್ಚಿ ಸಹ ಗಟ್ಟಿಯಿದೆ. ಆದರೆ ಅಲಗಾಡುತ್ತಿರುವುದು ಬಿವೈ ವಿಜಯೇಂದ್ರ ಅವರ ಕುರ್ಚಿ ಎಂದು ಟಾಗ್ ಕೊಟ್ಟಿದ್ದಾರೆ. : , , , , ,