ಬಿಗ್ ಸ್ಕ್ರೀನ್’ನಲ್ಲಿ ಜೂಲನ್ ಗೋಸ್ವಾಮಿ ಕಥೆ ಹೇಳಲು ಅನುಷ್ಕಾ ಕಮ್ ಬ್ಯಾಕ್ ! ಮುಂಬೈ, ಫೆಬ್ರವರಿ 03, 2020 (..): ಅನುಷ್ಕಾ ಶರ್ಮಾ ಈಗ ಮತ್ತೊಮ್ಮೆ ಬಾಲಿವುಡ್ ‘ಗೆ ಕಮ್ ಬ್ಯಾಕ್ ಆಗಲು ಸಜ್ಜಾಗಿದ್ದಾರಂತೆ. ಕೆಲ‌ ವರ್ಷಗಳಿಂದ ಬಣ್ಣದ ಲೋಕದಿಂದ ದೂರ ಉಳಿದಿರುವ ಅನುಷ್ಕಾ ಮತ್ತೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಮಹಿಳಾ ತಂಡದ ಕ್ರಿಕೆಟ್ ನಾಯಕಿ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸುವ ಮೂಲಕ ಮತ್ತೊಮ್ಮೆ ಬಣ್ಣದ ಲೋಕಕ್ಕೆ ಅನುಷ್ಕಾ, ಕಾಲಿಡುತ್ತಿದ್ದಾರೆ ಎಂಬ ಮಾತೊಂದು ಬಿಟೌನ್ ನಲ್ಲಿ ಕೇಳಿಬರುತ್ತಿದೆ. ಈ ಹಿಂದೆ ನಟ‌ ಶಾರುಖ್ ಖಾನ್ ಹಾಗೂ ಅನುಷ್ಕಾ ಶರ್ಮಾ ಮುಖ್ಯಭೂಮಿಕೆಯಲ್ಲಿ ತೆರೆಕಂಡ ಜೀರೋ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತ ಬಳಿಕ ಅನುಷ್ಕಾ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿರಲಿಲ್ಲ.