ಹೊಸ ಫೋಟೋಶೂಟ್ ಮಾಡಿಸಿದ ರಶ್ಮಿಕಾ ಬೆಂಗಳೂರು, ಫೆಬ್ರವರಿ 03, 2020 (..): ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟಿ ರಶ್ಮಿಕಾ ಹೊಸ ಫೋಟೊಶೂಟ್‌ ಮಾಡಿಸಿದ್ದಾರೆ. ಸದ್ಯ ತಮಿಳಿನ ‘ಸುಲ್ತಾನ್‌’ ಚಿತ್ರದಲ್ಲಿ ನಟಿಸಲು ರಶ್ಮಿಕಾ ತಯಾರಿ ನಡೆಸುತ್ತಿದ್ದಾರೆ. ಕಾಲಿವುಡ್‌ನಲ್ಲಿ ಇದು ಅವರ ಮೊದಲ ಚಿತ್ರ. ಇದನ್ನು ನಿರ್ದೇಶಿಸಿರುವುದು ಬಕ್ಕಿಯರಾಜ್ ಕಣ್ಣನ್. ಈ ನಡುವೆಯೇ ರಶ್ಮಿಕಾ ಹೊಸ ಫೋಟೊಶೂಟ್‌ ಮಾಡಿಸಿ ವಿವಿಧ ಭಂಗಿಯಲ್ಲಿ ಆಕೆ ಕ್ಯಾಮೆರಾಕ್ಕೆ ಪೋಸ್‌ ನೀಡಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಇದರ ನಡುವೆ ರಶ್ಮಿಕಾ ಅಲ್ಲು ಅರ್ಜುನ್‌ ಜೊತೆಗೆ ಹೊಸ ಚಿತ್ರದಲ್ಲಿ ಸೊಂಟ ಬಳುಕಿಸಲು ಸಿದ್ಧವಾಗಿದ್ದಾರೆ.ಹೊಸ ಚಿತ್ರದ ಶೂಟಿಂಗ್‌ ಆರಂಭವಾಗಲಿದೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ.