ನಟ ರಿಷಿ ಕಪೂರ್ ಮತ್ತೆ ಆಸ್ಪತ್ರೆಗೆ ದಾಖಲು ನವದೆಹಲಿ, ಫೆಬ್ರವರಿ 03, 2020 (..): ಅನಾರೋಗ್ಯದಿಂದಾಗಿ ನಟ ರಿಷಿ ಕಪೂರ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೆಹಲಿಯಲ್ಲಿ ಫ್ಯಾಮಿಲಿ ಫಂಕ್ಷನ್ ವೊಂದರಲ್ಲಿ ರಿಷಿ ಕಪೂರ್ ಭಾಗವಹಿಸಬೇಕಿತ್ತು. ಆದ್ರೆ, ಅಷ್ಟರಲ್ಲಿ ಅವರನ್ನ ದೆಹಲಿಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪತ್ನಿ ನೀತು ಕಪೂರ್, ಪುತ್ರ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಆಸ್ಪತ್ರೆಯಲ್ಲಿದ್ದು, ರಿಷಿ ಕಪೂರ್ ಅವರ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ಅರ್ಮಾನ್ ಜೈನ್ ರವರ ಮೆಹಂದಿ ಸಮಾರಂಭದಲ್ಲಿ ರಿಷಿ ಕಪೂರ್ ಮತ್ತು ಕುಟುಂಬ ಪಾಲ್ಗೊಳ್ಳಲಿಲ್ಲ ಎಂದು ಸುದ್ದಿ ಆಗಿತ್ತು. ಈ ಬೆನ್ನಲ್ಲೇ ರಿಷಿ ಕಪೂರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.