ಪವರ್ ‘ಜೇಮ್ಸ್’ಗೆ ಯಾರಾಗ್ತಾರೆ ನಾಯಕಿ ? ಪೂಜಾ ಹೆಗ್ಡೆ, ರಶ್ಮಿನಾ, ಶ್ರೀಲೀಲಾ ಹೆಸರು ಲಿಸ್ಟ್’ನಲ್ಲಿ ಬೆಂಗಳೂರು, ಫೆಬ್ರವರಿ 01, 2019 (..): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಫೀವರ್ ಕ್ರಿಯೇಟ್ ಆಗಿಬಿಟ್ಟಿದೆ. ಭರಾಟೆ ನಂತರ ಚೇತನ್ ಆಕ್ಷನ್ ಕಟ್ ಹೇಳ್ತಿರುವ ಡ್ರೀಮ್ ಪ್ರಾಜೆಕ್ಟ್ ಈ ಜೇಮ್ಸ್’ನಲ್ಲಿ ಪವರ್ ಸ್ಟಾರ್’ಗೆ ನಾಯಕಿ ಹುಡುಕಾಟ ಶುರು ಮಾಡಿದೆ ಚಿತ್ರತಂಡ. ಅಪ್ಪು ಜೊತೆಗೆ ಹೆಜ್ಜೆ ಹಾಕೋ ಚಾನ್ಸ್ ಈ ಬಾರಿ ಯಾರಿಗೆ ಸಿಗಲಿದೆ ಅನ್ನೋದು ಸದ್ಯಕ್ಕೆ ಗಾಂಧಿನಗರದ ಹಾಟ್ ಟಾಪಿಕ್. ತೆಲುಗಿನಲ್ಲಿ ಸಖತ್ ಹೆಸರು ಮಾಡ್ತಿರೋ ಪೂಜೆ ಹೆಗಡೆ, ಅಂಜನಿಪುತ್ರನ ರಾಣಿ ರಶ್ಮಿಕಾ ಹೆಸರು ಕೇಳಿ ಬರ್ತಿದೆ. ಈ ನಡುವೆ ಭರಾಟೆ ಚಿತ್ರದ ನಾಯಕಿ ಶ್ರೀಲೀಲಾ ಇದ್ದಾರೆ.