ರೇಟಿಂಗ್ ಕಡಿಮೆ ಆಗಿದ್ದಕ್ಕೆ ಖಡಕ್ ಉತ್ತರ ನೀಡಿದ ದೀಪಿಕಾ ನವದೆಹಲಿ, ಫೆಬ್ರವರಿ 01, 2019 (..): ಐಎಮ್‌ಡಿಬಿಯಲ್ಲಿ ತಮ್ಮ ಛಪಾಕ್ ಸಿನಿಮಾದ ರೇಟಿಂಗ್ ಕಡಿಮೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ದೀಪಿಕಾ ಪಡುಕೋಣೆ ಖಡಕ್ ಉತ್ತರ ನೀಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ದೀಪಿಕಾ ಅವರು ‘ಅವರು ನನ್ನ ಸಿನಿಮಾದ ಐಎಂಡಿಬಿ ರೇಟಿಂಗ್ ಬದಲಾಯಿಸಬಹುದು ಹೊರತು ನನ್ನ ಮನಸ್ಸನ್ನಲ್ಲ’ ಎಂದು ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಕ್ಕೆ ಭೇಟಿ ನೀಡಿ ಅಲ್ಲಿ ಹಲ್ಲೆಗೋಳಗಾದ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು. ಇದೇ ಸಂದರ್ಭದಲ್ಲಿ ಆಸಿಡ್ ದಾಳಿಗೆ ಒಳಗಾದ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಛಪಾಕ್ ಸಿನಿಮಾ ಕೂಡ ಬಿಡುಗಡೆಯಾಯಿತು.