ಮೈಸೂರು ಅರಮನೆಯ ಉಸ್ತಾದ್ ತಿಲಕ್ ಜೆಟ್ಟಿ ನಿಧನ… ಮೈಸೂರು,ಜ,29,2020(..): ವಜ್ರಮುಷ್ಠಿ ಕಾಳಗದಲ್ಲಿ ಸೆಣೆಸಿದ್ದ ಮೈಸೂರು ಅರಮನೆಯ ಉಸ್ತಾದ್ ತಿಲಕ್ ಜೆಟ್ಟಿ (56) ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ತಿಲಕ್ ಜೆಟ್ಟಿ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ನಡುವೆ ಇಂದು ಬೆಳಗಿನ ಜಾವ‌ ತಮ್ಮ ಸ್ವಗೃಹದಲ್ಲಿ ತಿಲಕ್ ಜೆಟ್ಟಿ ದೈವಾಧೀನರಾದರು. ತಿಲಕ್ ಜೆಟ್ಟಿ ಒಬ್ಬ ಪುತ್ರ, ಪುತ್ರಿ ಹಾಗೂ‌ ಪತ್ನಿಯನ್ನು ಅಗಲಿದ್ದಾರೆ. ತಿಲಕ್ ಜೆಟ್ಟಿ ಮೈಸೂರಿನ ನಜರ್ ಬಾದ್ ನಲ್ಲಿರೋ ನಿಂಬಜಾದೇವಿ ದೇವಾಲಯದಲ್ಲಿ ವ್ಯವಸ್ಥಾಪಕರಾಗಿದ್ದರು. ವಜ್ರಮುಷ್ಠಿ ಕಾಳಗದಲ್ಲಿ ಸೆಣೆಸಾಡಿದ್ದರು. ತಿಲ್ ಜೆಟ್ಟಿ ಅವರ ಪಾರ್ಥೀವ ಶರೀರವನ್ನ ವಿದ್ಯಾರಣ್ಯಪುರಂ‌ ‌ನಿವಾಸದಲ್ಲಿ ಅಂತಿಮ‌ ದರ್ಶನಕ್ಕಿಡಲಾಗಿದೆ. ಸಂಜೆ 5 ಗಂಟೆಗೆ ಚಾಮುಂಡಿಬೆಟ್ಟ ತಪ್ಪಲಿನ‌ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. : - - – .