ಮಾಲ್ಗುಡಿ ಡೇಸ್ ಫೆ.7 ರಂದು ತೆರೆಗೆ: ಸಿನಿಮಾ ನೋಡಿ ಯಶಸ್ಸು ಕೊಡಿ – ಮೈಸೂರಿನಲ್ಲಿ ನಟ ವಿಜಯ್ ರಾಘವೇಂದ್ರ ಮನವಿ ಮೈಸೂರು,ಜ,28,2020(..): ನಟ ವಿಜಯ್ ರಾಘವೇಂದ್ರ ಅಭಿನಯದ ಬಹು ನಿರೀಕ್ಷೆಯ ಸಿನಿಮಾ ಮಾಲ್ಗುಡಿ ಡೇಸ್ ಫೆಬ್ರವರಿ 7 ರಂದು ಬಿಡುಗಡೆಯಾಗಲಿದೆ. ಈ ನಡುವೆ ಇಂದು ನಟ ವಿಜಯರಾಘವೇಂದ್ರ ಅವರು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸಿನಿಮಾದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಮಾಲ್ಗುಡಿ ಡೇಸ್ ಸಿನಿಮಾ ನೋಡಿದರೇ ಜನರಿಗೆ ಇಷ್ಟವಾಗುತ್ತದೆ. ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ಸರಣಿಗೂ ಇದಕ್ಕೂ ಹೋಲಿಕೆ ಇರೋದಿಲ್ಲ. ಅದೇ ಟೈಟಲ್ ಇಟ್ಟುಕೊಂಡ ಜನರ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಇದು ಹೊಸ ಮಾಲ್ಗುಡಿ ಡೇಸ್ ಸಿನಿಮಾ ಎಂದು ವಿಜಯ್ ರಾಘವೇಂದ್ರ ತಿಳಿಸಿದ್ದಾರೆ. ಸಿನಿಮಾದಲ್ಲಿ ಬಹಳ ಚಾಲೆಂಜಿಗ್ ಆದ ರೋಲ್ ಸಿಕ್ಕಿದೆ. ಹಳೆ ಸಿನಿಮಾ ಟೈಟಲ್ ಇಟ್ಟಿಕೊಂಡಾಗ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಹೆಚ್ಚಿರುತ್ತೆ. ಮಾಲ್ಗುಡಿ ಡೇಸ್ ಟೈಟಲ್ ಇಟ್ಟಾಗಲು ಆ ಭಯ ಇತ್ತು. ಈಗ ಭಯದ ಜೊತೆ ವಿಶ್ವಾಸವಿದೆ. ಆ ಟೈಟಲ್ ಗೆ ನ್ಯಾಯ ಒದಗಿಸಿದ್ದೇವೆ. ಎಲ್ಲ ಸಿನಿಪ್ರಿಯರು ಮತ್ತೊಮ್ಮೆ ಈ ಸಿನಿಮಾ ನೋಡಿ ಯಶಸ್ಸನ್ನ ಕೊಡಿ ಎಂದ ನಟ ವಿಜಯ್ ರಾಘವೇಂದ್ರ ಮನವಿ ಮಾಡಿದರು. : – . 7---