ನಮ್ಮ ಸುದ್ದಿಗೆ ಬಂದರೇ ಕೈ ಕಾಲು ಎರಡನ್ನು ಕತ್ತರಿಸುತ್ತೇವೆ- ಮಾಜಿ ಸಚಿವ ಯುಟಿ ಖಾದರ್ ಗೆ ಬೆದರಿಕೆ… ಮಂಗಳೂರು,ಜ,28,2020(..): ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಈ ನಡುವೆ ಮಾಜಿ ಸಚಿವ ಯು.ಟಿ ಖಾದರ್ ಗೆ ಕೊಲೆ ಬೆದರಿಕೆ ಹಾಕಲಾಗಿದೆ. ನಿನ್ನೆ ಮಂಗಳೂರಿನಲ್ಲಿ ನಡೆದ ಸಿಎಎ ಸಮಾವೇಶದ ವೇಳೆ ಮಾಜಿ ಸಚಿವ ಯು.ಟಿ ಖಾದರ್ ಗೆ ಬೆದರಿಕೆ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಮಾವೇಶದ ವೇಳೆ ಕಾರ್ಯಕರ್ತರು ಮಳೆಯಾಳಂನಲ್ಲಿ ಬಿಜೆಪಿಗೆ ಘೋಷಣೆ ಕೂಗಿದ್ದಾರೆ. ಹಾಗಯೇ ಮಾಜಿ ಸಚಿವ ಯುಟಿ ಖಾದರ್ ಗೆ, ನಮ್ಮ ಸುದ್ದಿಗೆ ಬಂದರೆ ಕೈ ಕಾಲು ಎರಡನ್ನು ಕತ್ತರಿಸುತ್ತೇವೆ. ಬೇಕಿದ್ದರೇ ತಲೆಯನ್ನೂ ಕಡಿಯುತ್ಥೇವೆ ಎಂದು ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಮಾಜಿ ಸಚಿವ ಯುಟಿ ಖಾದರ್ ಗೆ ಅವಾಚ್ಯ ಶಬ್ದ ಬಳಸಿ ಬೆದರಿಕೆ ಹಾಕಲಾಗಿದ್ದು ಬೆದರಿಕೆ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. : - – – -