ಮೈಸೂರು ನಗರ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ: ಕಾಂಗ್ರೆಸ್ ಗೆ ಎರಡು, ಜೆಡಿಎಸ್ ಗೆ ಎರಡು ಅಧ್ಯಕ್ಷ ಸ್ಥಾನ… ಮೈಸೂರು,ಜ,27,2020(..): ಮೈಸೂರು ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಸ್ಥಾನಗಳಿಗೆ ಚುನಾವಣೆ ನಡೆಯಿತು. ಹಣಕಾಸು ಸ್ಥಾಯಿ ಸಮಿತಿ, ಅರೋಗ್ಯ ಸ್ಥಾಯಿ ಸಮಿತಿ,ಲೆಕ್ಕಪತ್ರ ಸ್ಥಾಯಿ ಸಮಿತಿ, ಯೋಜನಾ ಸ್ಥಾಯಿ ಸಮಿತಿಗೆ ಚುನಾವಣೆ ನಡೆದಿದ್ದು ಈ ಪೈಕಿ ಎರಡು ಕಾಂಗ್ರೆಸ್ ,ಎರಡು ಜೆಡಿಎಸ್ ಗೆ ಅಧ್ಯಕ್ಷ ಸ್ಥಾನ ಲಭಿಸಿದೆ. ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ನಿರ್ಮಲ ಹರೀಶ್ ಅಯ್ಕೆಯಾದರೇ ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜೆ ಗೋಪಿ ಅಯ್ಕೆಯಾದರು. ಇನ್ನು ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿ ಅಜರತ್ ಉಲ್ಲಾ ಅಯ್ಕೆಯಾದರೇ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪಲ್ಲವಿ ಬೇಗಂ ಅಯ್ಕೆಯಾದರು. : - -