ತಲೆಗೆ ಹೊಡೆದು ದುಷ್ಕರ್ಮಿಗಳಿಂದ ವೃದ್ಧನ ಬರ್ಬರ ಹತ್ಯೆ…. ಮೈಸೂರು,ಜ,27,2020(..): ದುಷ್ಕರ್ಮಿಗಳು ವೃದ್ಧ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ. ನಂಜನಗೂಡು-ಮೈಸೂರು ಹೆದ್ದಾರಿಯ ಅರಸು ಬಡಾವಣೆಯಲ್ಲಿ ಈ ಘಟನೆ ನಡೆದಿದೆ. 60 ವರ್ಷದ ಬಸವರಾಜು ಹತ್ಯೆಯಾದ ವ್ಯಕ್ತಿ. ನಿನ್ನೆ ರಾತ್ರಿ ಮನೆಯಿಂದ ಹೊರಗಡೆ ಬಂದ ವೇಳೆ ದುಷ್ಕರ್ಮಿಗಳು ಬಸವರಾಜು ಅವರನ್ನ ಹತ್ಯೆ ಮಾಡಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಈ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - - – -