ಎಷ್ಟೇ ಕೊಲೆ ಬೆದರಿಕೆಗಳು ಪತ್ರ ಬಂದರೂ ಹೆದರಲ್ಲ: ನಿರಂತರ ಹೋರಾಟ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ… ಬೆಂಗಳೂರು,ಜ,25,2020(..): ನನಗೆ ಎಷ್ಟೇ ಕೊಲೆ ಬೆದರಿಕೆ ಪತ್ರಗಳು ಬಂದರೂ ನಾನು ಹೆದರಲ್ಲ. ನಾನು ನಿರಂತರ ಹೋರಾಟ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. ತಮಗೆ ಕೊಲೆ ಬೆದರಿಕೆ ಪತ್ರ ಬಂದ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಎಷ್ಟೇ ಕೊಲೆ ಬೆದರಿಕೆ ಪತ್ರ ಬರಲಿ ನಾನು ಹೆದರಲ್ಲ. ಕೆಲ ಕೈಲಾಗದವರು ಪತ್ರ ಬರೆದು ಬೆದರಿಕೆ ಒಡ್ಡುತ್ತಾರೆ. ನಾನು ಇಂತಹ ಬೆದರಿಕೆಗಳಿಗೆ ಬಗ್ಗುವವನಲ್ಲ. ನಾನು ದೇವರನ್ನು ನಂಬಿ‌ ಬದುಕಿದವನು. ದೇವರು ನಮ್ಮ‌ ಆಯುಷ್ಯ ನಿರ್ಧಾರ ಮಾಡಿರುತ್ತಾನೆ. ನನ್ನನ್ನು ಮುಟ್ಟೋಕು ಇವರಿಂದ ಆಗುವುದಿಲ್ಲ ಎಂದರು. ಹಾಗೆಯೇ ಧರ್ಮ ಧರ್ಮಗಳ ಮಧ್ಯೆ ಬಿಜೆಪಿ ಕಂದಕ ಸೃಷ್ಟಿ ಮಾಡಿದೆ. ರಾಜಕೀಯವಾಗಿ ಬಿಜೆಪಿ ನನ್ನನ್ನು ಎದುರಿಸಲು ಆಗುತ್ತಿಲ್ಲ. ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ನಾನು ನಿರಂತರವಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಹಾಗೆಯೇ ಮಧು ಬಂಗಾರಪ್ಪ ಮತ್ತು ರಮೇಶ್ ಬಾಬು ಜೆಡಿಎಸ್ ತೊರೆಯುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ, ಬರುವವರು ಬರುತ್ತಾರೆ, ಹೋಗುವವರು ಹೋಗುತ್ತಾರೆ. ಬಂದು ಹೋಗುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಪಕ್ಷ ಬಿಟ್ಟು ಹೋಗುವುದಾದರೇ ಹೋಗಲಿ. ದೊಡ್ಡ ಪಕ್ಷಕ್ಕೆ ಸೇರಿ ಏನೋ ಸಾಧನೆ ಮಾಡುತ್ತೇನೆಂಬ ಭ್ರಮೆ ಅವರಿಗಿದೆ ಎಂದು ಲೇವಡಿ ಮಾಡಿದರು. : - - - - .