ನನಗೆ ಗುಡ್ ನ್ಯೂಸು ಇಲ್ಲ. ಬ್ಯಾಡ್ ನ್ಯೂಸು ಇಲ್ಲ -ಕೆ.ಸಿ ವೇಣುಗೋಪಾಲ್ ಭೇಟಿಯಾದ ಬಳಿಕ ಡಿ.ಕೆ ಶಿವಕುಮಾರ್ ಹೇಳಿಕೆ… ನವದೆಹಲಿ,ಜ,25,2020(..): ನನೆಗೆ ಯಾವುದೇ ಗುಡ್ ನ್ಯೂಸು ಇಲ್ಲ. ಬ್ಯಾಡ್ ನ್ಯೂಸು ಇಲ್ಲ ಎಂದು ರಾಜ್ಯಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರ ಭೇಟಿ ಬಳಿಕ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನವದೆಹಲಿಯಲ್ಲಿ ಇಂದು ರಾಜ್ಯಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರನ್ನ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಭೇಟಿಯಾಗಿ ಚರ್ಚೆ ನಡೆಸಿದರು. ಬಳಿಕ ಮಾಧ್ಯಮದ ಜತೆ ಮಾತನಾಡಿದ ಡಿಕೆ ಶಿವಕುಮಾರ್ , ಕೆಸಿ ವೇಣುಗೋಪಾಲ್ ಜತೆ ರಾಜಕೀಯದ ಬಗ್ಗೆ ಚರ್ಚೆ ಮಾಡಿಲ್ಲ. ಇದು ಸೌಜನ್ಯ ಭೇಟಿ ಅಷ್ಟೆ ಎಂದರು. ಹಾಗೆಯೇ ಕೆಪಿಸಿಸಿ ಹುದ್ದೆಯ ಬಗ್ಗೆಯೂ ಚರ್ಚಿಸಿಲ್ಲ . ನನಗೆ ಗುಡ್ ನ್ಯೂಸ್ ಇಲ್ಲ. ಬ್ಯಾಡ್ ನ್ಯೂಸು ಇಲ್ಲ. ಪಕ್ಷದ ಬೆಳವಣಿಗೆ ಬಗ್ಗೆ ಬೇರೆಯವರು ನೋಡಿಕೊಳ್ಳುತ್ತಾರೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು. ಕೆಪಿಸಿಸಿ ಅಧ್ಯಕ್ಷಗಾದಿ ಮೇಲೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. : - - -