17 ಮಂದಿಗೂ ಸ್ಥಾನಮಾನ ನೀಡಬೇಕು: ಕೊಡದಿದ್ರೆ ಏನಾಗುತ್ತೆ ಮುಂದೆ ನೋಡೋಣ ಎಂದ ಮಾಜಿ ಸಚಿವ ಹೆಚ್.ವಿಶ್ವನಾಥ್… ಬೆಂಗಳೂರು,ಜ,25,2020(..): ನಿನ್ನೆಯಷ್ಟೆ ವಿದೇಶ ಪ್ರವಾಸದಿಂದ ವಾಪಸ್ ಆದ ಬೆನ್ನಲ್ಲೆ ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದು ಈ ಕುರಿತು ಮಾತನಾಡಿರುವ ಮಾಜಿ ಸಚಿವ ಹೆಚ್.ವಿಶ್ವನಾಥ್, 17 ಮಂದಿಗೂ ಸ್ಥಾನಮಾನ ನೀಡಬೇಕು. ಕೊಡದಿದ್ರೆ ಮುಂದೆ ನೋಡೋಣ ಎಂದು ಹೇಳಿದ್ದಾರೆ. ಗೆದ್ದವರಿಗೆ ಮಾತ್ರ ಸಚಿವ ಸ್ಥಾನ ನೀಡುವುದಾಗಿ ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಬಿಎಸ್ ಯಡಿಯೂರಪ್ಪ ಮಾತಿನ ಮೇಲೆ ನಿಲ್ಲುವ ನಾಯಕ. ಕೊಟ್ಟ ಮಾತು ಉಳಿಸಿಕೊಳ್ಳುವ ವಿಶ್ವಾಸವಿದೆ. ನಿಮ್ಮಿಂದಲೇ ಸರ್ಕಾರ ಬಂದಿದೆ ಎಂದು ಹೇಳಿದ್ದಾರೆ. ಹೀಗಾಗಿ ರಾಜೀನಾಮೆ ಕೊಟ್ಟ ಎಲ್ಲಾ 17 ಮಂದಿಗೂ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು. ಹಿಂದೆ ಹುಣಸೂರಲ್ಲಿ ಬಿಜೆಪಿ ಎಲ್ಲಿತ್ತು. ನಾನು ಸೋತಿರಬಹುದು. ಮೊದಲು 5 ರಿಂದ 6 ಸಾವಿರ ಮತಗಳು ಬರುತ್ತಿದ್ದವು. ಈಗ ನಾನು 54 ಸಾವಿರ ಮತಪಡೆದಿದ್ದೇನೆ. ಪಕ್ಷ ಬೆಳೆದಿದೆ. ಈ ನಡುವೆ ಎಲ್ಲಾ 17 ಮಂದಿಗೂ ಸ್ಥಾನಮಾನ ನೀಡಲಿ ಕೊಡದಿದ್ರೆ ಏನಾಗುತ್ತೆ ಅಂತಾ ಮುಂದೆ ನೋಡೋಣ ಎಂದು ತಿಳಿಸಿದರು. : - -- - ..