ಜೆಡಿಎಸ್ ನಿಂದ ಟಿಕೆಟ್ ಕೈ ತಪ್ಪಿದ್ರೆ ಬೇರೆ ಪಕ್ಷದಿಂದ ಸ್ಪರ್ಧೆ-ಜೆಡಿಎಸ್ ವಕ್ತಾರ ರಮೇಶ್ ಬಾಬು ಸ್ಪಷ್ಟನೆ…. ಕೋಲಾರ,ಜ,25,2020(..): ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಜೆಡಿಎಸ್ ನಿಂದ ಟಿಕೆಟ್ ಕೈತಪ್ಪಿದರೇ ಬೇರೆ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಸ್ಪಷ್ಟನೆ ನೀಡಿದ್ದಾರೆ. ಜೆಡಿಎಸ್ ತೊರೆಯುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಮೇಶ್ ಬಾಬು, ಸದ್ಯ ನಾನು ಈಗ ಜೆಡಿಎಸ್ ನಲ್ಲಿದ್ದೇನೆ. ಜೆಡಿಎಸ್ ಅನ್ನ ಅಧಿಕೃತವಾಗಿ ತೊರೆದಿಲ್ಲ. ಈ ಬಗ್ಗೆ ಮುಂದಿನ 15 ದಿನಗಳಲ್ಲಿ ನನ್ನ ತೀರ್ಮಾನವನ್ನ ಸ್ಪಷ್ಟಪಡಿಸುತ್ತೇನೆ. ಚುನಾವಣೆಯಲ್ಲಿ ಟಿಕೆಟ್ ಕೊಡುವ ವಿಶ್ವಾಸವಿದೆ. ಟಿಕೆಟ್ ಕೊಡದಿದ್ದರೇ ಮುಂದಿನ ನಿರ್ಧಾರ ಎಂದರು. ಚುನಾವಣೆಯಿಂದ ಹಿಂದೆ ಸರಿಯಲ್ಲ. ಜೆಡಿಎಸ್ ನಿಂದ ಟಿಕೆಟ್ ಸಿಗದಿದ್ದರೇ ಬೇರೆ ಪಕ್ಷದಿಂದ ಸ್ಪರ್ಧಿಸುತ್ತೇನೆ. ಶಿಕ್ಷಕರು, ಪದವೀಧರರು ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದು ರಮೇಶ್ ಬಾಬು ತಿಳಿಸಿದರು. : - – - - -