ಬಿಲ್’ಗೇಟ್ಸ್ ಅವತಾರದಲ್ಲಿ ಚಿಕ್ಕಣ್ಣ ಮಿಂಚಿಂಗ್ ! ಬೆಂಗಳೂರು, ಜನವರಿ 25, 2019 (..): ಶಿಶಿರ ಮತ್ತು ಕಾಮಿಡಿ ಕಿಂಗ್​​ ಚಿಕ್ಕಣ್ಣ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ‘ಬಿಲ್​ಗೇಟ್ಸ್’ ನಾಲ್ಕು ವರ್ಷದ ಹಿಂದೆ ಸೆಟ್ಟೇರಿದ ಸಿನಿಮಾ ಈಗ ರಿಲೀಸ್​​ಗೆ ಸನ್ನದವಾಗಿದೆ. ಬಿಲ್​ಗೇಟ್ಸ್​​​ ಚಿತ್ರ ಟೀಸರ್, ಟ್ರೈಲರ್ ಮತ್ತು ಹಾಡುಗಳು ಗಮನ ಸೇಳೆಯುತ್ತಿದ್ದು ಪಕ್ಕ ಕಾಮಿಡಿ ಎಂಟರ್​​ಟೈನರ್ ಸಿನಿಮಾ ಅನ್ನೋದು ಮೇಲ್​ನೋಟಕ್ಕೆ ಸ್ಪಷ್ಠವಾಗುತ್ತಿದೆ. ಸ್ವರೂಪ್ ಕಂಬೈನ್ಸ್ ರವರ ಸಹಕಾರದೊಂದಿಗೆ ವಸಂತ್ ಕುಮಾರ್, ನಾಗನಹಳ್ಳಿ ಯತೀಶ್, ಅರವಿಂದ್ ಕುಮಾರ್ ಸೇರಿದಂತೆ ಅನೇಕರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.